ಗುರುವಾರ, ಫೆಬ್ರವರಿ 17, 2011

ತಪ್ಪು ತಿಳೀಬೇಡ ಗೆಳತಿ


ನೆನ್ನೆ ರಾತ್ರಿಯ ಕನಸು ನೀನು
ತಪ್ಪು ತಿಳೀಬೇಡ ಗೆಳತಿ
ನೀ ಬರೀ ರಾತ್ರಿಯ ಕನಸೆಂದು
ನನ್ನೆದೆಯ ಭುವಿಯೋಳಗಿನ ತೇವ ನೀನು
ನನ್ನ ಪ್ರತಿರಾತ್ರಿಯ ಕನಸುಗಳ ಒಡತಿ ನೀನು
ಕಣ್ಮುಂದೆ ಬಂದು ಕಣ್ಕುಕ್ಕಿ ಕಾಡದಿದ್ದರೇನು
ಪ್ರತಿರಾತ್ರಿಯು ಕನಸಾಗಿ ಬಂದು
ಈ ಮನದಂಗಳದಿ ಒಲವ ಜಡಿಮಳೆ ಸುರಿಸುತ್ತಿರುವೆ ನೀನು


ಬಾ ಗೆಳತಿ  ಒಮ್ಮೆ ಬಂದು ನಿಂತುಬಿಡು 
ಕನಸಾಗಿ ಬರುವ ನಿನ್ನ
ಒಮ್ಮೆ ಕಣ್ತುಂಬ ನೋಡಿ ಕಣ್ತುಂಬಿಕೊಳ್ಳುವೆನು
ಕಣ್ಣ ರೆಪ್ಪೆಯೊಳಗೆ ಮುಚ್ಚಿ ಕಾಯುವೆನು
ದೃಷ್ಠಿ ಶೂನ್ಯವಾದರು ಕಣ್ಬಿಡದೆ ನಿನ್ನನ್ನಲಿರಿಸುವೇನು 
ಬರೀ ನನ್ನ ಪದಗಳೊಳಗೆ ಬಂದಿಯಾಗದಿರು 
ಬಂದನವ ಕಳಚಿ 
ನನ್ನೊಲವ ದಡದ ಮೇಲೆ ನಿಲ್ಲು ಬಾ 
ಪ್ರತಿ ಅಲೆಯೊಳಗೆ ನಾ  ಸೇರಿ
ಪನ್ನೀರಾಗಿ ಪ್ರತಿಭಾರಿ ನಿನ್ನ ಚುಂಬಿಸುವೆನು




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ