![]() ಸನಿಹ... ನಾನೆಂದು ಅಂಜುತ್ತಿದ್ದೆ |
ಮಂಗಳವಾರ, ಮಾರ್ಚ್ 29, 2011
ಸನಿಹ
ಸೋಮವಾರ, ಮಾರ್ಚ್ 28, 2011
ಹಂಬಲ
![]() ಹಂಬಲ.. |
ಸೋಮವಾರ, ಮಾರ್ಚ್ 21, 2011
ಒಬ್ಬಂಟಿ ನಾನು
![]() ಒಬ್ಬಂಟಿ ನಾನು .. |
ಶುಕ್ರವಾರ, ಮಾರ್ಚ್ 18, 2011
ಕಥೆ ಹೇಳುತ್ತಿವೆ ಕುರುಡು ಕಣ್ಣುಗಳು
ಗೆಳೆಯರೆ ಇದು ಭೋಪಾಲ್ ಅನಿಲ ದುರಂತದ ಬಗೆಗಿನ ತೀರ್ಪು ಬಂದಾಗ ಬರೆದ ಕವನ ಆದರೆ ಮತ್ತೆ ಜಪಾನಿನಲ್ಲಿ ಅಂತದ್ದೇ ಒಂದು ದುರಂತ ನಡೆದು ಜನರ ಜೀವನ ಅಸ್ತವ್ಯಸ್ತ ವಾಗಿದೆ ಅದಕ್ಕಾಗಿ ಇದನ್ನು ಈಗ ತಮ್ಮಗಳ ಮುಂದೆ ಇಡುತ್ತಿದ್ದೇನೆ ಧನ್ಯವಾದಗಳು
<

ನಿರಂತರ ನಡೆಯುತ್ತಿದೆ ಪಯಣ
ಕನಸುಗಳೇ ಇಲ್ಲದ ಕವಲು ದಾರಿಗಳಲ್ಲಿ
ಪ್ರತಿ ಹೆಜ್ಜೆಯು ಪ್ರತಿದ್ವನಿಸುತ್ತಿದೆ
ಈ ಬದುಕು ಘೋರ ಘೋರ........
ಇಂದೋ ನಾಳೆಯೋ ನಾಳಿದ್ದೋ ಸುಧಾರಿಸಬಹುದ
ಕವಲೊಡೆದ ಬದುಕುಗಳು ಕಣ್ತೆರೆಯಬಹುದ
ವರುಷಗಳಿಂದ ಆರ್ತಿಸುತ್ತಿರುವ ನೋವಿನ ನರಳಾಟ
ಮುಂದಾದರು ಅಂತ್ಯದೆಡೆಗೆ ತೆರಳಬಹುದಾ....?
ಅಗಣಿತ ಕನಸುಗಳು ಅಜೀವಗೊಂಡಿವೆ
ಹೊಸ ಕನಸಕಾಣಲು ಕಣ್ಣುಗಳೇ ಇಲ್ಲವಾಗಿವೆ
ಸಾಂತ್ವಾನ ಹೇಳುವ ಮನಸ್ಸುಗಲಿಲ್ಲ
ಕೈ ಹಿಡಿದು ಮುನ್ನಡೆಸಲು ಮತ್ತೊಂದು ಕರವಿಲ್ಲ
ಮುಂದಣ ಹೆಜ್ಜೆ ಇಡಲು ಮನಸ್ಸಿಲ್ಲ
ಇರುವ ಕಾಲುಗಳಲ್ಲಿ ಬಲವಿಲ್ಲ
ಪ್ರತಿಯೊಂದು ಮುನ್ನಡೆಗಳಿಗೂ ನೆರವು ಬೇಕಿದೆ
ಆಸರೆಗಾಗಿ ಪ್ರತಿಕ್ಷಣ ಅಂಗಲಾಚುವಂತಾಗಿದೆ
ನೋಡೀಗ ನನ್ನ ಮನಸ್ಸು ನನ್ನ ಮಾತೆ ಕೇಳುತ್ತಿಲ್ಲ
ನೀ ಹಾಡಿದ ಮಾತ ಕೇಳುವ ಭಾಗ್ಯವಂತು ಇಲ್ಲ
ಅಸ್ವಸ್ತತೆಯ ಹಾದಿಯಲ್ಲಿ ನಿರಂತರ ಹೋರಾಟ
ಮಾನಸಿಕ ದೌರ್ಬಲ್ಯದ ಎರಕ ಮೂರ್ತಿಯಾದೆ ನಾ
ಹೌದು ಇಲ್ಲಿ ನಿರಂತರ ಕಥೆ ಹೇಳುತ್ತಿವೆ
ನಾಳಿನ ಜಗವ ನೋಡಲಾಗದ ಕುರುಡು ಕಣ್ಣುಗಳು
ನೋಡಿದವರೆದೆಯಲ್ಲಿ ಚಪ್ಪಾಳೆ ಬಡಿಯುತ್ತಿವೆ
ಇಂಚು ಸರಿಸಲಾಗದ ನನ್ನ ಕೈಗಳು
ಮನಸ್ಸಿರುವವರ ಮನಸ್ಸಿನಮೇಲೆ ದಾವಂತದ ಹೆಜ್ಜೆ ಹಿಡುತ್ತಿವೆ
ಮುಂದಡಿಯಿಡಲಾಗದ ನನ್ನ ಕಾಲುಗಳು
ಕೂಗಿ ಕೂಗಿ ನಿನ್ನ ಕರೆಯುತ್ತಿವೆ
ದಶಕಗಳಿಂದ ಒಂದೇ ಒಂದು ಶಬ್ದ ಹೊರಡಿಸದ ನಾಲಗೆ
ಇಲ್ಲ ಕ್ಷಮಿಸುವುದಿಲ್ಲ
ನಿನ್ನ ಇಂಥ ಘೋರವೆಸಗಿದ ಕಾಲವೇ ನಿನ್ನ
ನಿನ್ನತ್ತ ಬೇಗ ಕರೆದುಕೊಳ್ಳದ ಅಂತ್ಯವೆ ನಿನ್ನ
ಇಲ್ಲ ಮನ್ನಿಸುವುದಿಲ್ಲ
ನಿನ್ನ ಜಗವನಾಳುವ ದೊರೆತನವೆ ನಿನ್ನ
ಬಂಡವಾಳಶಾಹಿತ್ವಕ್ಕೆ ಮಣೆಹಾಕುವ ನಿನ್ನ
ಇಲ್ಲ ಅಭಿನಂದಿಸುವುದಿಲ್ಲ ನಿನ್ನ
ಕಡೆಗಣಿತರಾದವರತ್ತ ಕರುಣೆ ಇಲ್ಲದ ಕಾನೂನೇ ನಿನ್ನ
ನನ್ನ ನೊಂದ ಬದುಕಿಗೆ ನ್ಯಾಯ ದೊರಕಿಸದ ನಿನ್ನ
ಇಲ್ಲ ಕ್ಷಮಿಸುವುದಿಲ್ಲ.........
ಇಲ್ಲ ಕ್ಷಮಿಸುವುದಿಲ್ಲ................
ಶಶಿಭಾಗ್ಯಜ
ಮಂಗಳವಾರ, ಮಾರ್ಚ್ 15, 2011
ಗುರುವಾರ, ಮಾರ್ಚ್ 3, 2011
ನಾವು ನಾವಾಗಿದ್ದರೆ .
![]() ನಾವು ನಾವಾಗಿದ್ದರೆ . ಹೌದು ನಾವು ನಾವಾಗಿದ್ದರೆ |
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)




