ಬುಧವಾರ, ಫೆಬ್ರವರಿ 2, 2011

ಬೇಸರವೆನಿಲ್ಲ ನೀ ಅಂದಿದ್ದಕ್ಕೆ 


ನೀ ಅಂದಿದ್ದಕ್ಕೆ ಬೇಜಾರೇನಿಲ್ಲ ಬಿಡು
ನೀನಾದರು ಅಣೆಕಟ್ಟೆಯಾಕಬೇಕು ನಿನ್ನೆದೆಯೊಳಗೆ
ನಿನ್ನೊಳಗೂ ಹರಿಯಲಿ ಭಾವನೆಗಳ ನದಿ ಭೋರ್ಗರೆದು
ನಾನು ಒಂದಷ್ಟನ್ನು ಮೊಗೆದು ಕುಡಿಯುವೆ 

ಆದರು ನೀ ಯಾಕಾದರೂ ಹಾಗನ್ನಬೇಕು
ನನ್ನೆದೆಯನ್ನೇ ನಿನ್ನ ಮಾತಿನ ಬಾಣಕ್ಕೆ ಗುರಿಯಾಗಿಸಬೇಕು
ಅದು ನಿಜ ಬಿಡು ನಿನ್ನ ಕಣ್ಣಿಗೆ ಮತ್ತಿನ್ನಾರು ಕಂಡಾರು
ಹೊಡೆಯಲಿಕ್ಕಾದರು  ನಿನಗೆ ಇನ್ಯಾರು ಸಿಕ್ಕಾರು

ಇಷ್ಟಕ್ಕೂ ನಿನಗೂ ಸ್ವಾತಂತ್ರ್ಯವಿದೆಯಲ್ಲ
ನಿನ್ನ ಮಾತನಾಡಬೇಡ ಎನ್ನಲಿಕ್ಕಾದೀತೇ
ಪ್ರೀತಿ ಕನಸು ಮಾತುಗಳೆಂದು ಯಾರೊಬ್ಬನ ಸ್ವತ್ತಲ್ಲ
ಅವುಗಳಿಗೆಂದು ಅಸ್ಪ್ರುಷ್ಯತೆಯ ಸ್ಪರ್ಶವಿಲ್ಲ 

ಕಾಡ ಹೂ ಕೂಡ ಎಂದೂ ಮುಟ್ಟದ ಚಂದಿರನ ಕಾಣುತ್ತದೆ
ಅವನ ಬೆಳದಿಂಗಳಿನೊಂದಿಗೆ ಮುದ್ದಾಟಗೈಯುತ್ತದೆ
ಅಂತಹುದರಲ್ಲಿ ನನ್ನೋಳಗೊಂದಾಗಿರುವ ಹೂ ನೀನು
ನೀ ನನ್ನೊಂದಿಗೆ ಆಟವಾಡಿದ್ದರಲ್ಲಿ ತಪ್ಪಿಲ್ಲ ಬಿಡು 
ಅದಕೇನು ಬೇಸರವಿಲ್ಲ ನೀ ಇಲ್ಲೇ ಆಡಿಕೊಂಡಿರು 
ಮತ್ತೊಂದೆದೆಯ ಬಯಲ ಹುಡುಕದಿದ್ದರಷ್ಟೇ ಸಾಕು

  ಇತಿ 
ನೀನಾಡುವ ಬಯಲಿನೊಡೆತನದ ಜೀವ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ