ಭಾನುವಾರ, ಮೇ 11, 2014

ನನ್ನವ್ವ


   
ತಳವಿರದ ಹಕ್ಕಿ ಗೂಡಿಗೆ
ಒಣ ಕಡ್ಡಿಗಳಾಗಿ ನಿಂದಳವಳು
ಒಲುಮೆಯ ಗೂಡು
ಮರಿಹಕ್ಕಿಗಳ ಬೆಚ್ಚನೆಯ ತಾಣವಾಯಿತು
ಕೊಡುತ್ತ ನಿಂತಳು ಅವಳಲ್ಲೆ
ಪ್ರೀತಿಯೊಲುಮೆಯ ಗುಟುಕು
ಅವಳ ಒಲುಮೆಯಂಗಳದಲ್ಲೆ ಆಡಿದೆ
ಅವಳಂತರಂಗದಲ್ಲೇ ಪ್ರೀತಿಯಿಂದ ಉಳಿದೆ
ನಾನೊಂದು ಮುದ್ದು ಮರಿಹಕ್ಕಿಯಾಗಿ ಬೆಳೆದೆ.

       ಹಗಲೆಲ್ಲಾ ಬರೀ ಜಂಜಾಟ

ಮರಿಹಕ್ಕಿಗಾಗಿ ಇನ್ನಿಲ್ಲದ ಅಲೆದಾಟ
ನಿತ್ಯ ನೀರವ ಮುಸ್ಸಂಜೆಗೆ ಆಗಮನ
ಹಗಲೆಲ್ಲಾ ಅವಳು ಸುರಿಸಿದ ಬೆವರು
ರಾತ್ರಿ ಮರಿ ಹಕ್ಕಿಯ ಮೃಷ್ಠಾನ್ನಾ
ನಂತರದ ನಿಶ್ಯಬ್ದ ಕಾರಿರುಳೆ ಸುಂದರ
ಆಗವಳ ಪ್ರೀತಿಯ ಲಾಲಿಯ ಶಶಬ್ದ
ಬರಸೆಳೆದು ಎದೆಗವಚಿಕೊಂಡು ಬಿಡುವಳಾಗ
ಮರಿಹಕ್ಕಿಯ ಮರೆಮಾಚುವ ಬಾಣಂತಿಯಕ್ಕಿಯಂತೆಯೆ
ಇಂತಹ ನೂರು ನೂರು ರಾತ್ರಿ ಕಳೆದು ಬೆಳೆದೆ.
 
       ನನ್ನೆದೆಯ ಗೂಡಲ್ಲಿ ಅವಳಿಟ್ಟ ಹೆಜ್ಜೆ ನೂರಾರು

ಪ್ರೀತಿಯ, ಅನುರಾಗದ, ವಾತ್ಸಲ್ಯದ ಹೆಜ್ಜೆಗಳವು
ಅವಳು ಹೆಜ್ಜೆಯಿಟ್ಟಲ್ಲಿ ಮರುಭೂಮಿಯಾಗಿಲ್ಲ,
ಕಾಲಡಿಗೆ ಸಿಲುಕಿ ಮಾನವೀಯತೆಯ ಗರಿಕೆ ಸತ್ತಿಲ್ಲ

ಅಲ್ಲಿ ಬೆಳೆದು ನಿಂತಿವೆ 
ನೂರಾರು, ಸಾವಿರಾರುಅನುರಾಗದ ಸುಮ ಕುಸುಮಗಳು
ಅವಳು ಹೆಜ್ಜೆಯಿಟ್ಟು ನಡೆದಂತೆ 
ಉದ್ದುದ್ದ ದಾರಿಯಾಗಿ ಬೆಳೆದೆ.

        ಅವಳಿಗಾಗಿ ಕೊನೆಸಿಗಂದಂತೆ ನಾ ಬೆಳೆಯಬೇಕು

ಅಂತ್ಯವಿಲ್ಲದ ದಾರಿಯಾಗಿ ಸಾಗುತ್ತಿರಬೇಕು
ನಾನೊಮ್ಮೆ ಬಳೆಯದೆ ನಿಂತೆನೆಂದರೆ
ನನ್ನೆದೆಯ ದಾರಿ ದಾಟಿ ಮುನ್ನಡೆಯುವಳು
ನಂತರ ಕೂಗಿದರೆ ಬರುವಳೇನು??? ಇಲ್ಲ!!!
ಅದಕ್ಕಾಗಿ ಬೆಳೆಯುತ್ತಲೇ ಇರುವೆ ನಾನು

ದಣಿಯದ ದಾರಿಹೋಕಳಾಗಿ ಅವಳು
ಜೀವಕ್ಕೆ ಜೀವ ಕೊಟ್ಟ ನನ್ನವ್ವ............

                                                     ದೀಪೂ.