ಏನು ಚಂದ ಭೂತಾಯೇ ನಿನ್ನ ಹಸಿರುಡುಗೆಯ ಸಿಂಗಾರ
ಕಣ್ಮನಕ್ಕೆಲ್ಲ ಸಂತೃಪ್ತಿಯ ಸಂಚಾರ
ಜೀವರಾಶಿಗಳಿಗೆಲ್ಲ ಜೀವಂತಿಕೆಯ ಸಾಕಾರ
ಬಿತ್ತಿದಾ ಕಾಳಿಗೆಲ್ಲ ಬೆಳೆಯಾಗಲು ತೋರುವೆ ನೀ ಆದರ
ಮೊಳೆತ ಬೀಜಗಳಿಗೆಲ್ಲ ಗಿಡ ಮರವಾಗಲು ಸಹಕಾರ
ಹೆಜ್ಜೆ ಹೆಜ್ಜೆಗೂ ಎಷ್ಟು ತಾಯೆ ನಿನ್ನ ಗುಣ ಉದಾರ
ಹೊತ್ತು ಸೋಲುತ್ತಿದೆ ಈ ಬದುಕು ನಿನ್ನ ಋಣಭಾರ
ಮಂಗಳವಾರ, ಡಿಸೆಂಬರ್ 14, 2010
ಶನಿವಾರ, ಡಿಸೆಂಬರ್ 11, 2010
ಕನಸುಗಳು
ಕನಸ್ಸುಗಳೆಂದರೆ ಸುವರ್ಣ ತತ್ತಿಗಳು
ಒಂದೊಂದರೋಳಗು ನಾಳಿನ ಹೊನ್ನಿನ ಬದುಕಿದೆ
ಜೋಪಾನಗೈಯಬೇಕು, ಮೊಟ್ಟೆ ಬಂಗಾರದ್ದದೆಂದಲ್ಲ
ನಾಳೆಯ ಬದುಕು ಬಂಗಾರವಾಗಲೆಂದು
ಒಂದೊಂದರೋಳಗು ನಾಳಿನ ಹೊನ್ನಿನ ಬದುಕಿದೆ
ಜೋಪಾನಗೈಯಬೇಕು, ಮೊಟ್ಟೆ ಬಂಗಾರದ್ದದೆಂದಲ್ಲ
ನಾಳೆಯ ಬದುಕು ಬಂಗಾರವಾಗಲೆಂದು
ಕಂಬನಿ ಒರೆಸುವವರಾರಿಲ್ಲ
ನಿಲ್ಲದ ನೋವಿನ ಜೀವನ ನನ್ನದು ಗೆಳತಿ
ಒರೆಸುವರಾರಿಲ್ಲ ಸುರಿದ ಕಂಬನಿ ಹನಿಯ
ಹರಿದುಹೋದ ನೀರಿಗೆ ಸಾಕ್ಷಿಯಿಟ್ಟಿಲ್ಲ ನಾನು
ಕತ್ತಲೆಯಲ್ಲೇ ಕರಗಿಹೋದವು ಕಣ್ಣೋಟ ಕಲೆಯದೆ
ತೋರಿಸಿಕ್ಕೊಳ್ಳುವ ಮನಸ್ಸು ಎನಗಿಲ್ಲ
ಮಾಯವಾಗಲಿ ಅವುಗಳಲ್ಲೇ ಹರಿದ ಗೆರೆಯನ್ನುಳಿಸದೆ
ಒರೆಸುವರಾರಿಲ್ಲ ಸುರಿದ ಕಂಬನಿ ಹನಿಯ
ಹರಿದುಹೋದ ನೀರಿಗೆ ಸಾಕ್ಷಿಯಿಟ್ಟಿಲ್ಲ ನಾನು
ಕತ್ತಲೆಯಲ್ಲೇ ಕರಗಿಹೋದವು ಕಣ್ಣೋಟ ಕಲೆಯದೆ
ತೋರಿಸಿಕ್ಕೊಳ್ಳುವ ಮನಸ್ಸು ಎನಗಿಲ್ಲ
ಮಾಯವಾಗಲಿ ಅವುಗಳಲ್ಲೇ ಹರಿದ ಗೆರೆಯನ್ನುಳಿಸದೆ
ಮಂಗಳವಾರ, ನವೆಂಬರ್ 30, 2010
ಸೂರ್ಯನಿಗೂ ನನ್ನವಳ ಕಂಡರೆ ಮೋಹ
ಬಾ ಗೆಳತಿ ಬೇಗ ಓದಿಕೊ
ಮಂಜಿನ ಹನಿಗಳ ಅಕ್ಷರಗಳು ಜಾರಿಹೊದಾವು
ಅದಕ್ಕೂ ಮುನ್ನ ಒಮ್ಮೆ ಓದಿಬಿಡು
ಪ್ರತಿ ಎಲೆಯ ಮೇಲೂ ಪ್ರೇಮ ಪತ್ರ ಬರೆದಿಹೆನು
ಸೂರ್ಯನೆ ನನಗೆ ಪ್ರತಿಸ್ಪರ್ದಿ
ಅವಗೂ ನಿನ್ನ ಕಂಡರೆ ಮೋಹ
ಅದಕ್ಕೆ ನಾ ಬರೆದ ಪತ್ರವ ಅಳಿಸುತ್ತಿಹನು
ಮಂಜಿನ ಹನಿಗಳನ್ನೆಲ್ಲ ಕರಗಿಸುತ್ತಿಹನು
ಆದರು ಪ್ರತಿನಿತ್ಯ ಹೂಗಳ ಮಾತ್ರ ಅರಳಿಸುವನು
ನಾ ಪ್ರೇಮ ಪತ್ರ ಬರೆಯಲು ಅನುವು ನೀಡುತ್ತಿರುವನು
ಮಂಜಿನ ಹನಿಗಳ ಅಕ್ಷರಗಳು ಜಾರಿಹೊದಾವು
ಅದಕ್ಕೂ ಮುನ್ನ ಒಮ್ಮೆ ಓದಿಬಿಡು
ಪ್ರತಿ ಎಲೆಯ ಮೇಲೂ ಪ್ರೇಮ ಪತ್ರ ಬರೆದಿಹೆನು
ಸೂರ್ಯನೆ ನನಗೆ ಪ್ರತಿಸ್ಪರ್ದಿ
ಅವಗೂ ನಿನ್ನ ಕಂಡರೆ ಮೋಹ
ಅದಕ್ಕೆ ನಾ ಬರೆದ ಪತ್ರವ ಅಳಿಸುತ್ತಿಹನು
ಮಂಜಿನ ಹನಿಗಳನ್ನೆಲ್ಲ ಕರಗಿಸುತ್ತಿಹನು
ಆದರು ಪ್ರತಿನಿತ್ಯ ಹೂಗಳ ಮಾತ್ರ ಅರಳಿಸುವನು
ನಾ ಪ್ರೇಮ ಪತ್ರ ಬರೆಯಲು ಅನುವು ನೀಡುತ್ತಿರುವನು
ಭಾನುವಾರ, ನವೆಂಬರ್ 28, 2010
ಚುಕ್ಕಿ
ಮನದ ಮೂಲೆಯಲ್ಲಿ ನೀನೆಂಬುದೊಂದು ಬೆಳಕಿನ ಚುಕ್ಕಿ
ನನ್ನೆದೆಯ ನಭವ ಬೆಳಗುವ ಸೂರ್ಯನಾಗಲಿಲ್ಲ
ನಿಶೆಯಲ್ಲಿ ತಂಪನ್ನೀಯುವ ಚಂದ್ರನಾಗಲಿಲ್ಲ
ಹೋಗಲಿ ಹಿಡಿದು ತಂದು ಮನದಂಗಳದ
ಹಣತೆಯಾಗಿಸೋಣವೆಂದರೆ ಕೈಗೆಟುಕುತ್ತಿಲ್ಲ
ನನ್ನೆದೆಯ ನಭವ ಬೆಳಗುವ ಸೂರ್ಯನಾಗಲಿಲ್ಲ
ನಿಶೆಯಲ್ಲಿ ತಂಪನ್ನೀಯುವ ಚಂದ್ರನಾಗಲಿಲ್ಲ
ಹೋಗಲಿ ಹಿಡಿದು ತಂದು ಮನದಂಗಳದ
ಹಣತೆಯಾಗಿಸೋಣವೆಂದರೆ ಕೈಗೆಟುಕುತ್ತಿಲ್ಲ
ಕೊರಳಾಗುವೆಯ
ಬಾನಿನೊಳಗಿನ ಸಾಲು ಸಾಲು ಚುಕ್ಕಿಗಳನ್ನ
ಬಿಗಿದು ಪೋಣಿಸಿ ನಿನ್ನೊಲವಿಗೆ ಮಾಲೆ ಹಾಕಲೆಣಿಸಿದ್ದೇನೆ ಗೆಳತಿ
ಹಾರಕ್ಕೆ ಕೊರಳಾಗುವೆಯ
ಬಿಗಿಯೋ ದಾರವಾಗುವೆಯ
ಇಲ್ಲ ಪೊಣಿಸೋ ಸೂಜಿಯಾಗುವೆಯೂ ನೀನೆ ಹೇಳು,
ಬಿಗಿದು ಪೋಣಿಸಿ ನಿನ್ನೊಲವಿಗೆ ಮಾಲೆ ಹಾಕಲೆಣಿಸಿದ್ದೇನೆ ಗೆಳತಿ
ಹಾರಕ್ಕೆ ಕೊರಳಾಗುವೆಯ
ಬಿಗಿಯೋ ದಾರವಾಗುವೆಯ
ಇಲ್ಲ ಪೊಣಿಸೋ ಸೂಜಿಯಾಗುವೆಯೂ ನೀನೆ ಹೇಳು,
ಶನಿವಾರ, ನವೆಂಬರ್ 27, 2010
ಕಂಬನಿ ಮುತ್ತು
ಸುರಿಸದಿರು ಕಂಬನಿ ಹನಿಯ ನನ್ನವ್ವ
ಕಡಲ ಮುತ್ತಿಗಿಂತ ಬಲು ದುಬಾರಿ ನನಗವು
ಎಷ್ಟು ಬೆಲೆ ತೆತ್ತಾದರೂ ಕೊಂಡುತರುವೆ ಒಡವೆ ಮುತ್ತ
ಎಷ್ಟು ಕಷ್ಟವಾದರೂ ನೋಡಲಾರೆ ನಿನ್ನ ಕಣ್ತೆವದ ಮುತ್ತ
ಕಡಲ ಮುತ್ತಿಗಿಂತ ಬಲು ದುಬಾರಿ ನನಗವು
ಎಷ್ಟು ಬೆಲೆ ತೆತ್ತಾದರೂ ಕೊಂಡುತರುವೆ ಒಡವೆ ಮುತ್ತ
ಎಷ್ಟು ಕಷ್ಟವಾದರೂ ನೋಡಲಾರೆ ನಿನ್ನ ಕಣ್ತೆವದ ಮುತ್ತ
ಒಲವ ಹಕ್ಕಿ
ಒಲವ ಹಕ್ಕಿಗೆ ಗಾವುದ ಗಾವುದ ದೂರದ ರೆಕ್ಕೆಗಳು,
ಭುವಿಯಾಕಾಶದ ಎಲ್ಲೆ ದಾಟಿ ಹಾರುತ್ತಿದೆ,
ಜೀವದಾಚೆಗೆ ನನ್ನ ಪ್ರೇಮವ ಕೊಂಡೊಯ್ಯುತ್ತಿದೆ,
ಪ್ರತಿಕ್ಷಣವು ನನ್ನೊಲವನು ಹೀರುತ್ತಿದೆ
ಭುವಿಯಾಕಾಶದ ಎಲ್ಲೆ ದಾಟಿ ಹಾರುತ್ತಿದೆ,
ಜೀವದಾಚೆಗೆ ನನ್ನ ಪ್ರೇಮವ ಕೊಂಡೊಯ್ಯುತ್ತಿದೆ,
ಪ್ರತಿಕ್ಷಣವು ನನ್ನೊಲವನು ಹೀರುತ್ತಿದೆ
ಬುಧವಾರ, ನವೆಂಬರ್ 24, 2010
ಮಂಜಿನ ಪದಗಳು
ಮುಂಜಾನೆ ಅರಳಿ ನಗುತ್ತಿರುವ ಹೂಗಳೆ
ನಿಮ್ಮ ಪ್ರತಿ ಎಸಳಿನ ಮೇಲೆ ಪ್ರೇಮ ಪತ್ರ ಬರೆಯಬೇಕು
ಮಂಜಿನ ಹನಿಗಳೆ ಪದ ಪುಂಜಗಳು
ಬುದ್ದಿವಾದ ಹೇಳಿ ಅವುಗಳಿಗೆ ಕರಗಿಹೊಗಬೇಡಿರೆಂದು
ನಿಮ್ಮ ಪ್ರತಿ ಎಸಳಿನ ಮೇಲೆ ಪ್ರೇಮ ಪತ್ರ ಬರೆಯಬೇಕು
ಮಂಜಿನ ಹನಿಗಳೆ ಪದ ಪುಂಜಗಳು
ಬುದ್ದಿವಾದ ಹೇಳಿ ಅವುಗಳಿಗೆ ಕರಗಿಹೊಗಬೇಡಿರೆಂದು
ಬುಧವಾರ, ನವೆಂಬರ್ 17, 2010
ನೆನಪು
ಒಂದು ಸುಂದರವಾದ ಇರುಳು
ಕತ್ತಲು ಹೆತ್ತದ್ದೆಲ್ಲ ಕತ್ತಲನ್ನೇ
ನನ್ನ ಮನ ಹಡೆದದ್ದೆಲ್ಲ ನಿನ್ನ ನೆನಪನ್ನೇ
ಕತ್ತಲುಗಳೆಲ್ಲ ಸತ್ತು ಸತ್ತು ಹುಟ್ಟಿದ್ದಾಯಿತು
ಸಾಯದಿದ್ದದ್ದು ಮತ್ತು ಬೆಳೆಯದಿದ್ದದ್ದು ನಿನ್ನ ನೆನಪು ಮಾತ್ರ
ಕತ್ತಲು ಹೆತ್ತದ್ದೆಲ್ಲ ಕತ್ತಲನ್ನೇ
ನನ್ನ ಮನ ಹಡೆದದ್ದೆಲ್ಲ ನಿನ್ನ ನೆನಪನ್ನೇ
ಕತ್ತಲುಗಳೆಲ್ಲ ಸತ್ತು ಸತ್ತು ಹುಟ್ಟಿದ್ದಾಯಿತು
ಸಾಯದಿದ್ದದ್ದು ಮತ್ತು ಬೆಳೆಯದಿದ್ದದ್ದು ನಿನ್ನ ನೆನಪು ಮಾತ್ರ
ಭಾವದ ಕಡಲು
ಭಾವ ಸಾಗರದ ಪ್ರತಿ ಹನಿಗಳ ಹಿಂದೆ
ನಿಂದಿವೆ ಗೆಳತಿ ನಿನ್ನ ನೆನಪುಗಳ ಮಂದೆ
ಭಾವನೆಗಳ ಕಡಲಿಗಿನ್ನೂ ಕೊನೆ ಕಾಣಲಿಲ್ಲ
ನಿನ್ನ ನೆನಪುಗಳ ಮರೆಯಲಿನ್ನೂ ನನಗಾಗಲಿಲ್ಲ
ನಿಂದಿವೆ ಗೆಳತಿ ನಿನ್ನ ನೆನಪುಗಳ ಮಂದೆ
ಭಾವನೆಗಳ ಕಡಲಿಗಿನ್ನೂ ಕೊನೆ ಕಾಣಲಿಲ್ಲ
ನಿನ್ನ ನೆನಪುಗಳ ಮರೆಯಲಿನ್ನೂ ನನಗಾಗಲಿಲ್ಲ
ಮಂಗಳವಾರ, ನವೆಂಬರ್ 16, 2010
ಜೀವನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನವಂತೆ ಅದಕ್ಕೆ ನಾನು ನನ್ನ ಸುತ್ತಲಿನೆಲ್ಲ ಪ್ರೀತಿಯ ಬಿಟ್ಟು ಸಿಗದ ಅವಳೆಂಬ ವಿಷವನ್ನುಡುಕಿ ಹೊರಟ್ಟಿದ್ದು
ಮಾತಾಡು ಗೆಳತಿ
ಬಡಿಯುತ್ತಿದೆ ಗೆಳತಿ ನನ್ನೆದೆಯೊಳಗೆ ನಿನ್ನ ಮಾತೆಂಬ ಮೌನ ಮೃದಂಗ ಮುರಿದು ಬಿಡು ನೀ ಮೌನವ ಮೌನಗಳೆಲ್ಲ ಮಾತುಗಳಾಗಿ ನುಗ್ಗಲಿ ನಿನ್ನೊಲವೆಂಬ ಡಮರು ನಾದದಿಂದ
ಮತ್ತೆ ಬಣ್ಣ ತುಂಬು ಬಾ ಗೆಳತಿ
ಮನದಂಗಳದಿ ನೀ ಬಿಡಿಸಿದ ರಂಗೋಲಿ
ಅಳಿಸಿಹೋಗುತ್ತಿದೆ ಗೆಳತಿ ಇಂದು
ನಿನ್ನ ವಿರಹದ ಜೋರು ಗಾಳಿ ಬೀಸುತ್ತಿದೆ
ಈಗ ಎಲ್ಲವು ಅಲ್ಲೋಲ ಕಲ್ಲೋಲ
ಬಾ ತಡೆಗೋಡೆಯ ನಿಲ್ಲಿಸು ತಡೆದು ನಿಲ್ಲಿಸಲು
ಮತ್ತೆ ಚುಕ್ಕಿ ಇಟ್ಟು ಬಣ್ಣ ತುಂಬು ಬಾ
ಒಲವ ರಂಗೋಲಿ ಅಳಿಸದೆ ನಗುತ್ತಿರಲಿ ಎಂದೂ
ಈ ಜೀವಕ್ಕೆ ಹಬ್ಬವೆ ಇರಲಿ ಎಂದೆಂದೂ
ಅಳಿಸಿಹೋಗುತ್ತಿದೆ ಗೆಳತಿ ಇಂದು
ನಿನ್ನ ವಿರಹದ ಜೋರು ಗಾಳಿ ಬೀಸುತ್ತಿದೆ
ಈಗ ಎಲ್ಲವು ಅಲ್ಲೋಲ ಕಲ್ಲೋಲ
ಬಾ ತಡೆಗೋಡೆಯ ನಿಲ್ಲಿಸು ತಡೆದು ನಿಲ್ಲಿಸಲು
ಮತ್ತೆ ಚುಕ್ಕಿ ಇಟ್ಟು ಬಣ್ಣ ತುಂಬು ಬಾ
ಒಲವ ರಂಗೋಲಿ ಅಳಿಸದೆ ನಗುತ್ತಿರಲಿ ಎಂದೂ
ಈ ಜೀವಕ್ಕೆ ಹಬ್ಬವೆ ಇರಲಿ ಎಂದೆಂದೂ
ಶನಿವಾರ, ಅಕ್ಟೋಬರ್ 30, 2010
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ನಿದ್ದೆ ಬರದೆ ಕನವರಿಸುತ್ತೇವೆ
ನಿದ್ರೆ ಕೊಡದ ದೇವರಿಗೂ ನಮಿಸುತ್ತೇವೆ
ವಿರಹವನ್ನೆ ಆಲಂಗಿಸಿ ಕೂರುತ್ತೇವೆ
ನಟ್ಟ ನಡುರಾತ್ರಿ ಎದ್ದು ನಗುತ್ತೇವೆ
ಕನಸುಗಳನ್ನೂ ಸಹ ಚುಂಬಿಸುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಕನ್ನಡಿಯೊಳಗೆ ಕನಸ್ಸುಗಳನ್ನು ಹುಡುಕುತ್ತೇವೆ
ಪ್ರೀತಿಯನ್ನೇ ದ್ವೇಷಿಸುತ್ತೇವೆ
ಹೃದಯದೊಳಗಿನ ಕಿಚ್ಚನ್ನು ಹಾಗೆ ಮುಚ್ಚಿಡುತ್ತೇವೆ
ಮಾತುಗಳನ್ನೆಲ್ಲ ಮೂಕಗೊಳಿಸಿ ಮಣ್ಣು ಮಾಡುತ್ತೇವೆ
ಆಸೆಗಳನ್ನೆಲ್ಲ ಅದುಮಿಟ್ಟು ಅರಗಿಸಿಕೊಳ್ಳುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಸಿಗದವರಿಗಾಗಿ ಸಿಕ್ಕ ಸಿಕ್ಕಲ್ಲೆಲ್ಲ ಸುತ್ತುತ್ತೇವೆ
ಮನದಂಗಳದಿ ಅವರಿಗೆಂದೆ ಹೂಗಳ ಬೆಳೆಸುತ್ತೇವೆ
ಎದೆಯ ಬಾಗಿಲನ್ನು ಮುಚ್ಚದೆ ತೆರೆದಿಡುತ್ತೇವೆ
ಪ್ರತಿ ಆಜ್ಞೆಗೂ ತಲೆಬಾಗಿ ವಂದಿಸುತ್ತೇವೆ
ಕಣ್ಣೊಳಗೆ ಕಣ್ಣಿಟ್ಟಗ ಸಣ್ಣಗೆ ನಡುಗುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಬೇಡವೆಂದರೆ ಉಸಿರನ್ನೂ ಬಿಗಿ ಹಿಡಿಯುತ್ತೇವೆ
ಕಣ್ಮುಚ್ಚಿಯೂ ಕಲ್ಪನೆಯೊಳಗೆ ಮುಳುಗುತ್ತೇವೆ
ಯಾವ ಮುರುಳಿಯ ಗಾನಕ್ಕೂ ಕಿವಿ ಕೊಡದೆ ಕಾಯುತ್ತೇವೆ
ಎಲ್ಲ ಮಮಕಾರಗಳನ್ನೂ ಮರೆತು ನಿಲ್ಲುತ್ತೇವೆ
ತುಟಿಯಂಚಿನ ಸಣ್ಣ ಕಿರುನಗೆಗಾಗಿ ಮಂಡಿಯೂರಿ ಕೂರುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಹೌದು ಏನೊಂದೂ ಪ್ರಯೋಜನವಿಲ್ಲ
ಗೊತ್ತಿಲ್ಲ ನಮಗೆ ನಮಗಾಗಿ ಅವರಿಲ್ಲ
ಗೊತ್ತಾದರು ಒಲವು ಕೇಳುವುದಿಲ್ಲ
ನಾಳೆ ಒಣಗುವ ಎಲೆಯ ಮೇಲೆ ಬರೆಯುತ್ತದೆ
ಕಂಬನಿಯ ಷಾಹಿಯಲ್ಲಿ ಅದ್ಡಿ ಅದ್ದಿ ಲೇಖನಿಯನ್ನು
ಯಾವ ತಪಾಲುಗಾರನು ಇಲ್ಲ ಕೊಂಡೋಗಿ ಕೊಡಲು
ಅಶ್ರು ಧಾರೆಯನ್ನೇ ಹರಿಸಿದರು ಎಲೆ ಒಣಗದಿರುವುದಿಲ್ಲ
ಇಲ್ಲ ಈ ಜಗತ್ತಿನ್ನಲ್ಲಿ ಪ್ರೀತಿಗೆ ಬೆಲೆಯಿಲ್ಲ
ಬೆಲೆ ಕಟ್ಟುವವರಂತು ಯಾರು ಇಲ್ಲ
ಗೊತ್ತಿದ್ದೂ ಇಲ್ಲದ ಪ್ರೇಮಕ್ಕಾಗಿ ಪರದಾಡುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ.........
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ...........
ನಿದ್ರೆ ಕೊಡದ ದೇವರಿಗೂ ನಮಿಸುತ್ತೇವೆ
ವಿರಹವನ್ನೆ ಆಲಂಗಿಸಿ ಕೂರುತ್ತೇವೆ
ನಟ್ಟ ನಡುರಾತ್ರಿ ಎದ್ದು ನಗುತ್ತೇವೆ
ಕನಸುಗಳನ್ನೂ ಸಹ ಚುಂಬಿಸುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಕನ್ನಡಿಯೊಳಗೆ ಕನಸ್ಸುಗಳನ್ನು ಹುಡುಕುತ್ತೇವೆ
ಪ್ರೀತಿಯನ್ನೇ ದ್ವೇಷಿಸುತ್ತೇವೆ
ಹೃದಯದೊಳಗಿನ ಕಿಚ್ಚನ್ನು ಹಾಗೆ ಮುಚ್ಚಿಡುತ್ತೇವೆ
ಮಾತುಗಳನ್ನೆಲ್ಲ ಮೂಕಗೊಳಿಸಿ ಮಣ್ಣು ಮಾಡುತ್ತೇವೆ
ಆಸೆಗಳನ್ನೆಲ್ಲ ಅದುಮಿಟ್ಟು ಅರಗಿಸಿಕೊಳ್ಳುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಸಿಗದವರಿಗಾಗಿ ಸಿಕ್ಕ ಸಿಕ್ಕಲ್ಲೆಲ್ಲ ಸುತ್ತುತ್ತೇವೆ
ಮನದಂಗಳದಿ ಅವರಿಗೆಂದೆ ಹೂಗಳ ಬೆಳೆಸುತ್ತೇವೆ
ಎದೆಯ ಬಾಗಿಲನ್ನು ಮುಚ್ಚದೆ ತೆರೆದಿಡುತ್ತೇವೆ
ಪ್ರತಿ ಆಜ್ಞೆಗೂ ತಲೆಬಾಗಿ ವಂದಿಸುತ್ತೇವೆ
ಕಣ್ಣೊಳಗೆ ಕಣ್ಣಿಟ್ಟಗ ಸಣ್ಣಗೆ ನಡುಗುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಬೇಡವೆಂದರೆ ಉಸಿರನ್ನೂ ಬಿಗಿ ಹಿಡಿಯುತ್ತೇವೆ
ಕಣ್ಮುಚ್ಚಿಯೂ ಕಲ್ಪನೆಯೊಳಗೆ ಮುಳುಗುತ್ತೇವೆ
ಯಾವ ಮುರುಳಿಯ ಗಾನಕ್ಕೂ ಕಿವಿ ಕೊಡದೆ ಕಾಯುತ್ತೇವೆ
ಎಲ್ಲ ಮಮಕಾರಗಳನ್ನೂ ಮರೆತು ನಿಲ್ಲುತ್ತೇವೆ
ತುಟಿಯಂಚಿನ ಸಣ್ಣ ಕಿರುನಗೆಗಾಗಿ ಮಂಡಿಯೂರಿ ಕೂರುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ
ಹೌದು ಏನೊಂದೂ ಪ್ರಯೋಜನವಿಲ್ಲ
ಗೊತ್ತಿಲ್ಲ ನಮಗೆ ನಮಗಾಗಿ ಅವರಿಲ್ಲ
ಗೊತ್ತಾದರು ಒಲವು ಕೇಳುವುದಿಲ್ಲ
ನಾಳೆ ಒಣಗುವ ಎಲೆಯ ಮೇಲೆ ಬರೆಯುತ್ತದೆ
ಕಂಬನಿಯ ಷಾಹಿಯಲ್ಲಿ ಅದ್ಡಿ ಅದ್ದಿ ಲೇಖನಿಯನ್ನು
ಯಾವ ತಪಾಲುಗಾರನು ಇಲ್ಲ ಕೊಂಡೋಗಿ ಕೊಡಲು
ಅಶ್ರು ಧಾರೆಯನ್ನೇ ಹರಿಸಿದರು ಎಲೆ ಒಣಗದಿರುವುದಿಲ್ಲ
ಇಲ್ಲ ಈ ಜಗತ್ತಿನ್ನಲ್ಲಿ ಪ್ರೀತಿಗೆ ಬೆಲೆಯಿಲ್ಲ
ಬೆಲೆ ಕಟ್ಟುವವರಂತು ಯಾರು ಇಲ್ಲ
ಗೊತ್ತಿದ್ದೂ ಇಲ್ಲದ ಪ್ರೇಮಕ್ಕಾಗಿ ಪರದಾಡುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ.........
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ...........
ಸೋಲು ಗೆಳತಿ ನಿನ್ನ ಜೀವದ ಮುಂದೆ
ನಿನ್ನ ಹಮ್ಮಿನ ಮಹಲಿನಿಂದ ಕೊಂಚ ಕೆಳಗಿಳಿಯೇ ಗೆಳತಿ
ನಿನ್ನ ಅಭಿಮಾನಕ್ಕೆನು ಮುಕ್ಕಾಗುವುದಿಲ್ಲ
ಸೋಲು ಅಸಹನೀಯವೆಂದು ಕೊರಗಬೇಡ
ಸೋತರದು ಯಾರ ಮುಂದೆ ನೀ ಸೋಲುವೆ
ನಿನ್ನ ಜೀವದ ಮುಂದೆ, ಅದರೊಳಗಿರುವ ನನ್ನ ಮುಂದೆ
ದಿನ ಕಳೆದರೆ ನೆನಪಿನ ಋಣ ಹೆಚ್ಚುತ್ತದೆ
ನೀನೆ ಎತ್ತಿದ ವಾಂಚೆಯ ಬಡಿಗೆ ನಿನ್ನೆ ಬಡಿಯುತ್ತದೆ
ಈ ಮೌನವೆ ಮುಂದೆ ಸಹನೆಯ ಕಟ್ಟೆಗೆ ಸಿಡಿಮದ್ದಾಗುತ್ತದೆ
ನಿನ್ನ ಒಳನೋಟ ಕೊನೆಗೆ ನಿನ್ನೆದೆಯನ್ನೇ ಇರಿಯುತ್ತದೆ
ಪ್ರೇಮದ ರಕ್ತವನ್ನೀರಬಯಸುತ್ತದೆ
ಅದಕ್ಕೆ ಈಗಲೆ ಒಮ್ಮೆ ಸೋತುಬಿಡು ಗೆಳತಿ
ನಿನ್ನ ಜೀವದ ಮುಂದೆ, ಅದರೊಳಗಿರುವ ನನ್ನ ಮುಂದೆ
ನನಗೆ ಗೊತ್ತು ನೀ ಅಂತವಳಲ್ಲ
ಸಂತೆಯಲ್ಲಿ ಕಳೆದೋದ ನನ್ನ ನಾಳೆ ಹುಡುಕುವುದಿಲ್ಲ
ಕನಸುಗಳ ಒಂಟಿಯಾಗಿಸಿ ಕಂಗಾಲಾಗಿಸುವುದಿಲ್ಲ
ಕಡಲ ದಂಡೆಯಲ್ಲಿ ಕುಳಿತು ನೀರಿಗುಡುಕುವುದಿಲ್ಲ
ಗುರುತಿಲ್ಲದ ಹೆಜ್ಜೆಯನ್ನಿರಿಸಿ ನೀ ಕದ್ದು ಬರುವುದಿಲ್ಲ
ಅದಕ್ಕೆ ನೀ ಈಗಲೆ ಸೋಲುತೀಯಲ್ಲ ಗೆಳತಿ
ನಿನ್ನ ಜೀವದ ಮುಂದೆ, ಅದರೊಳಗಿರುವ ನನ್ನ ಮುಂದೆ
ನಿನ್ನ ಅಭಿಮಾನಕ್ಕೆನು ಮುಕ್ಕಾಗುವುದಿಲ್ಲ
ಸೋಲು ಅಸಹನೀಯವೆಂದು ಕೊರಗಬೇಡ
ಸೋತರದು ಯಾರ ಮುಂದೆ ನೀ ಸೋಲುವೆ
ನಿನ್ನ ಜೀವದ ಮುಂದೆ, ಅದರೊಳಗಿರುವ ನನ್ನ ಮುಂದೆ
ದಿನ ಕಳೆದರೆ ನೆನಪಿನ ಋಣ ಹೆಚ್ಚುತ್ತದೆ
ನೀನೆ ಎತ್ತಿದ ವಾಂಚೆಯ ಬಡಿಗೆ ನಿನ್ನೆ ಬಡಿಯುತ್ತದೆ
ಈ ಮೌನವೆ ಮುಂದೆ ಸಹನೆಯ ಕಟ್ಟೆಗೆ ಸಿಡಿಮದ್ದಾಗುತ್ತದೆ
ನಿನ್ನ ಒಳನೋಟ ಕೊನೆಗೆ ನಿನ್ನೆದೆಯನ್ನೇ ಇರಿಯುತ್ತದೆ
ಪ್ರೇಮದ ರಕ್ತವನ್ನೀರಬಯಸುತ್ತದೆ
ಅದಕ್ಕೆ ಈಗಲೆ ಒಮ್ಮೆ ಸೋತುಬಿಡು ಗೆಳತಿ
ನಿನ್ನ ಜೀವದ ಮುಂದೆ, ಅದರೊಳಗಿರುವ ನನ್ನ ಮುಂದೆ
ನನಗೆ ಗೊತ್ತು ನೀ ಅಂತವಳಲ್ಲ
ಸಂತೆಯಲ್ಲಿ ಕಳೆದೋದ ನನ್ನ ನಾಳೆ ಹುಡುಕುವುದಿಲ್ಲ
ಕನಸುಗಳ ಒಂಟಿಯಾಗಿಸಿ ಕಂಗಾಲಾಗಿಸುವುದಿಲ್ಲ
ಕಡಲ ದಂಡೆಯಲ್ಲಿ ಕುಳಿತು ನೀರಿಗುಡುಕುವುದಿಲ್ಲ
ಗುರುತಿಲ್ಲದ ಹೆಜ್ಜೆಯನ್ನಿರಿಸಿ ನೀ ಕದ್ದು ಬರುವುದಿಲ್ಲ
ಅದಕ್ಕೆ ನೀ ಈಗಲೆ ಸೋಲುತೀಯಲ್ಲ ಗೆಳತಿ
ನಿನ್ನ ಜೀವದ ಮುಂದೆ, ಅದರೊಳಗಿರುವ ನನ್ನ ಮುಂದೆ
ಶುಕ್ರವಾರ, ಅಕ್ಟೋಬರ್ 29, 2010
ಬಾ ಗೆಳತಿ
ನೆನ್ನೆ ರಾತ್ರಿಯ ಕನಸು ನೀನು
ತಪ್ಪು ತಿಳೀಬೇಡ ಗೆಳತಿ
ನೀ ಬರೀ ರಾತ್ರಿಯ ಕನಸೆಂದು
ನನ್ನೆದೆಯ ಭುವಿಯೋಳಗಿನ ತೇವ ನೀನು
ನನ್ನ ಪ್ರತಿ ರಾತ್ರಿಯ ಕನಸುಗಳ ಒಡತಿ ನೀನು
ಕಣ್ಮುಂದೆ ಬಂದು ಕಾಣುಕ್ಕಿ ಕಾದದಿದ್ದರೇನು
ಪ್ರತಿರಾತ್ರಿಯು ಕನಸಾಗಿ ಬಂದು
ಈ ಮನದಂಗಳದಿ ಒಲವ ಜಡಿಮಳೆ ಸುರಿಸುತ್ತಿರುವೆ ನೀನು
ಬಾ ಗೆಳತಿ ಒಮ್ಮೆ ಬಂದು ನಿಂತು ಬಿಡು
ಕನಸಾಗಿ ಬರುವ ನಿನ್ನ
ಒಮ್ಮೆ ಕಣ್ತುಂಬ ನೋಡಿ ಕಣ್ತುಂಬಿಕೊಳ್ಳುವೆನು
ಕಣ್ಣ ರೆಪ್ಪೆಯೊಳಗೆ ಮುಚ್ಚಿ ಕಾಯುವೆನು
ದೃಷ್ಠಿ ಶೂನ್ಯವಾದರು ಕಣ್ಬಿಡದೆ ನಿನ್ನನ್ನಲ್ಲಿರಿಸುವೇನು
ಬರೀ ನನ್ನ ಕನಸುಗಳೊಳಗೆ ಬಂದಿಯಾಗದಿರು
ಬಂದನವ ಕಳಚಿ
ನನ್ನೊಲವ ದಡದ ಮೇಲೆ ನಿಲ್ಲು ಬಾ
ಪ್ರತಿ ಅಲೆಯೊಳಗೆ ನಾ ಸೇರಿ
ಪಂನೀರಾಗಿ ಪ್ರತಿಭಾರಿ ನಿನ್ನ ಚುಂಬಿಸುವೆ
ತಪ್ಪು ತಿಳೀಬೇಡ ಗೆಳತಿ
ನೀ ಬರೀ ರಾತ್ರಿಯ ಕನಸೆಂದು
ನನ್ನೆದೆಯ ಭುವಿಯೋಳಗಿನ ತೇವ ನೀನು
ನನ್ನ ಪ್ರತಿ ರಾತ್ರಿಯ ಕನಸುಗಳ ಒಡತಿ ನೀನು
ಕಣ್ಮುಂದೆ ಬಂದು ಕಾಣುಕ್ಕಿ ಕಾದದಿದ್ದರೇನು
ಪ್ರತಿರಾತ್ರಿಯು ಕನಸಾಗಿ ಬಂದು
ಈ ಮನದಂಗಳದಿ ಒಲವ ಜಡಿಮಳೆ ಸುರಿಸುತ್ತಿರುವೆ ನೀನು
ಬಾ ಗೆಳತಿ ಒಮ್ಮೆ ಬಂದು ನಿಂತು ಬಿಡು
ಕನಸಾಗಿ ಬರುವ ನಿನ್ನ
ಒಮ್ಮೆ ಕಣ್ತುಂಬ ನೋಡಿ ಕಣ್ತುಂಬಿಕೊಳ್ಳುವೆನು
ಕಣ್ಣ ರೆಪ್ಪೆಯೊಳಗೆ ಮುಚ್ಚಿ ಕಾಯುವೆನು
ದೃಷ್ಠಿ ಶೂನ್ಯವಾದರು ಕಣ್ಬಿಡದೆ ನಿನ್ನನ್ನಲ್ಲಿರಿಸುವೇನು
ಬರೀ ನನ್ನ ಕನಸುಗಳೊಳಗೆ ಬಂದಿಯಾಗದಿರು
ಬಂದನವ ಕಳಚಿ
ನನ್ನೊಲವ ದಡದ ಮೇಲೆ ನಿಲ್ಲು ಬಾ
ಪ್ರತಿ ಅಲೆಯೊಳಗೆ ನಾ ಸೇರಿ
ಪಂನೀರಾಗಿ ಪ್ರತಿಭಾರಿ ನಿನ್ನ ಚುಂಬಿಸುವೆ
ನೆನಪು
ಒಂದು ಸುಂದರವಾದ ಇರುಳು
ಕತ್ತಲು ಹೆತ್ತದ್ದೆಲ್ಲ ಕತ್ತಲನ್ನೇ
ನನ್ನ ಮನ ಹಡೆದದ್ದೆಲ್ಲ ನಿನ್ನ ನೆನಪನ್ನೇ
ಕತ್ತಲುಗಳೆಲ್ಲ ಸತ್ತು ಸತ್ತು ಹುಟ್ಟಿದ್ದಾಯಿತು
ಸಾಯದಿದ್ದದ್ದು ಮತ್ತು ಬೆಳೆಯದಿದ್ದದ್ದು ನಿನ್ನ ನೆನಪು ಮಾತ್ರ
ಕತ್ತಲು ಹೆತ್ತದ್ದೆಲ್ಲ ಕತ್ತಲನ್ನೇ
ನನ್ನ ಮನ ಹಡೆದದ್ದೆಲ್ಲ ನಿನ್ನ ನೆನಪನ್ನೇ
ಕತ್ತಲುಗಳೆಲ್ಲ ಸತ್ತು ಸತ್ತು ಹುಟ್ಟಿದ್ದಾಯಿತು
ಸಾಯದಿದ್ದದ್ದು ಮತ್ತು ಬೆಳೆಯದಿದ್ದದ್ದು ನಿನ್ನ ನೆನಪು ಮಾತ್ರ
ಮಂಗಳವಾರ, ಅಕ್ಟೋಬರ್ 26, 2010
ಮುತ್ತಾಗುವೆಯ
ಬೆಳಗಿನಲ್ಲಿ ಹೊಳೆವ ಮಂಜ ಮುತ್ತಾದರೇನು
ಬೆಳ್ಳಂ ಬೆಳ್ಳಗೆ ಹೊಳೆವ ಮುತ್ತು ನೀನು
ಗೊತ್ತಿಲ್ಲ ನೀನು ಮುತ್ತಾ ಎಂದು
ನಿನ್ನ ಮುತ್ತಿಕ್ಕುವಾಸೆ ಮಾತ್ರ ನನಗೆ
ಮಂಜೂ ಮುತ್ತಿಡುತ್ತದೆ ಹಸಿರೆಲೆಯ ಪೈರ
ಹಸಿರೆಲೆಯೂ ಮುತ್ತಿಕ್ಕಿ ಜಾರಿಸುತ್ತದೆ ಆ ಮುತ್ತ
ನೀ ಮುತ್ತಾಗುವೆಯ
ನನ್ನ ಮುತ್ತಿಕ್ಕುವೆಯ
ನಾ ಹಸಿರೆಲೆಯ ಪೈರಾದರು
ನಿನ್ನ ಜಾರದಂತೆ ಹಿಡಿದಿಡುವೆ
ಬೆಳ್ಳಂ ಬೆಳ್ಳಗೆ ಹೊಳೆವ ಮುತ್ತು ನೀನು
ಗೊತ್ತಿಲ್ಲ ನೀನು ಮುತ್ತಾ ಎಂದು
ನಿನ್ನ ಮುತ್ತಿಕ್ಕುವಾಸೆ ಮಾತ್ರ ನನಗೆ
ಮಂಜೂ ಮುತ್ತಿಡುತ್ತದೆ ಹಸಿರೆಲೆಯ ಪೈರ
ಹಸಿರೆಲೆಯೂ ಮುತ್ತಿಕ್ಕಿ ಜಾರಿಸುತ್ತದೆ ಆ ಮುತ್ತ
ನೀ ಮುತ್ತಾಗುವೆಯ
ನನ್ನ ಮುತ್ತಿಕ್ಕುವೆಯ
ನಾ ಹಸಿರೆಲೆಯ ಪೈರಾದರು
ನಿನ್ನ ಜಾರದಂತೆ ಹಿಡಿದಿಡುವೆ
ನೀನಂದ್ರೆ ಬೇತಾಳ
ನನ್ನವಳು ಕೇಳಿದಳು ಮದ್ವೆ ಆಗೋಣ ಅಂತ ಬೇಡ ಹೆಂಡತಿಯರದ್ದು ತುಂಬಾ ಕಾಟ ಅಂದೆ, ಹಾಗಾದ್ರೆ ಪ್ರೆಮಿದು? ಅಂದ್ಲು ಅದು ಅದಕಿಂತ ಜಾಸ್ತಿ ಅಂದೆ, ಹಾಗಾದ್ರೆ ನಾನು ಅಂದ್ಲು, ನಾನು ವಿಕ್ರಮ ನೀನು ನಂಗೆ ಜೋತು ಬಿದ್ದ ಬೇತಾಳ ಅಂತ ಅಂದೆ
ಒಲವಿನಸಿರು
ನೂರು ಸ್ವರ ನೂರು ಮಾತು
ಉಸಿರೊಳಗೆ ಸೇರಿ ಹಸಿರಾದವು
ನಮ್ಮೆದೆಯೊಳಗೆ ಬಂಗಾರದ ಬೆಳೆ ಬೆಳೆದವು
ನಮ್ಮೊಲವ ಪಯಣದ ದಾರಿಗೆ
ಸಾಲು ಮರಗಳಾಗಿ ತಂಪನ್ನಿಯ್ದವು
ವಿರಹದ ಬಿಸಿಲಿನಿಂದ ನಮ್ಮ ಪ್ರೇಮದ ತಲೆಕಾಯ್ದವು
ಉಸಿರೊಳಗೆ ಸೇರಿ ಹಸಿರಾದವು
ನಮ್ಮೆದೆಯೊಳಗೆ ಬಂಗಾರದ ಬೆಳೆ ಬೆಳೆದವು
ನಮ್ಮೊಲವ ಪಯಣದ ದಾರಿಗೆ
ಸಾಲು ಮರಗಳಾಗಿ ತಂಪನ್ನಿಯ್ದವು
ವಿರಹದ ಬಿಸಿಲಿನಿಂದ ನಮ್ಮ ಪ್ರೇಮದ ತಲೆಕಾಯ್ದವು
ಮುನ್ನುಡಿ
ಮೂಕತನವು ಶಾಪವ ನೀಡಿ ಸುಡುತಲಿದೆ
ಮೊನದೊಳಗು ಸಾವಿರ ಮಾತಿನ ಪ್ರತಿದ್ವನಿ
ತನುವಿನೊಳಗೆ ಒಲವ ತನಗಳಿಗೆ ಹುಡುಕಾಡಿ
ಒಲುಮೆ ತುಂಬಿದ ಬಾಳಿಗೆ ಮಿಡುಕಾಡಿ
ನಾ ನಿನ್ನ ನೆನಪುಗಳೊಡನೆ ನಿಂತು ಪ್ರೇಮಗಾನ ಹಾಡಿ
ನಮ್ಮಿ ಪ್ರೇಮದ ಪಯಣಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ ಗೆಳತಿ
ಮೊನದೊಳಗು ಸಾವಿರ ಮಾತಿನ ಪ್ರತಿದ್ವನಿ
ತನುವಿನೊಳಗೆ ಒಲವ ತನಗಳಿಗೆ ಹುಡುಕಾಡಿ
ಒಲುಮೆ ತುಂಬಿದ ಬಾಳಿಗೆ ಮಿಡುಕಾಡಿ
ನಾ ನಿನ್ನ ನೆನಪುಗಳೊಡನೆ ನಿಂತು ಪ್ರೇಮಗಾನ ಹಾಡಿ
ನಮ್ಮಿ ಪ್ರೇಮದ ಪಯಣಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ ಗೆಳತಿ
ಭಾನುವಾರ, ಸೆಪ್ಟೆಂಬರ್ 19, 2010
ನನ್ನವಳು
ನನ್ನವಳು ನನ್ನ ಬಿಟ್ಟು ಹೋಗೋವರೆಗೂ ದಿನಾ ಕೇಳ್ತಾ ಇದ್ಲು ಪ್ರೀತಿ ಅಂದರೇನು ಅಂತ ನಾನು ಏನು ಹೇಳಿರಲಿಲ್ಲ ರಾತ್ರಿ message ಮಾಡಿದ್ದಾಳೆ ಈಗ ಗೊತ್ತಾಯ್ತು ಅಂತ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)