ಮಂಗಳವಾರ, ಡಿಸೆಂಬರ್ 14, 2010

ಏನು ಚಂದ ಭೂತಾಯಿ

ಏನು ಚಂದ ಭೂತಾಯೇ ನಿನ್ನ ಹಸಿರುಡುಗೆಯ ಸಿಂಗಾರ
ಕಣ್ಮನಕ್ಕೆಲ್ಲ ಸಂತೃಪ್ತಿಯ ಸಂಚಾರ
ಜೀವರಾಶಿಗಳಿಗೆಲ್ಲ ಜೀವಂತಿಕೆಯ ಸಾಕಾರ
ಬಿತ್ತಿದಾ ಕಾಳಿಗೆಲ್ಲ ಬೆಳೆಯಾಗಲು ತೋರುವೆ ನೀ ಆದರ
ಮೊಳೆತ ಬೀಜಗಳಿಗೆಲ್ಲ ಗಿಡ ಮರವಾಗಲು ಸಹಕಾರ
ಹೆಜ್ಜೆ ಹೆಜ್ಜೆಗೂ ಎಷ್ಟು ತಾಯೆ ನಿನ್ನ ಗುಣ ಉದಾರ
ಹೊತ್ತು ಸೋಲುತ್ತಿದೆ ಈ ಬದುಕು ನಿನ್ನ ಋಣಭಾರ

ಶನಿವಾರ, ಡಿಸೆಂಬರ್ 11, 2010

ಕನಸುಗಳು

ಕನಸ್ಸುಗಳೆಂದರೆ ಸುವರ್ಣ ತತ್ತಿಗಳು
ಒಂದೊಂದರೋಳಗು ನಾಳಿನ ಹೊನ್ನಿನ ಬದುಕಿದೆ
ಜೋಪಾನಗೈಯಬೇಕು, ಮೊಟ್ಟೆ ಬಂಗಾರದ್ದದೆಂದಲ್ಲ
ನಾಳೆಯ ಬದುಕು ಬಂಗಾರವಾಗಲೆಂದು

ಕಂಬನಿ ಒರೆಸುವವರಾರಿಲ್ಲ

ನಿಲ್ಲದ ನೋವಿನ ಜೀವನ ನನ್ನದು ಗೆಳತಿ
ಒರೆಸುವರಾರಿಲ್ಲ ಸುರಿದ ಕಂಬನಿ ಹನಿಯ
ಹರಿದುಹೋದ ನೀರಿಗೆ ಸಾಕ್ಷಿಯಿಟ್ಟಿಲ್ಲ ನಾನು
ಕತ್ತಲೆಯಲ್ಲೇ ಕರಗಿಹೋದವು ಕಣ್ಣೋಟ ಕಲೆಯದೆ
ತೋರಿಸಿಕ್ಕೊಳ್ಳುವ ಮನಸ್ಸು ಎನಗಿಲ್ಲ
ಮಾಯವಾಗಲಿ ಅವುಗಳಲ್ಲೇ ಹರಿದ ಗೆರೆಯನ್ನುಳಿಸದೆ