ಭಾನುವಾರ, ಜನವರಿ 30, 2011
ಶನಿವಾರ, ಜನವರಿ 29, 2011
ಗುರುವಾರ, ಜನವರಿ 27, 2011
ಏನಿದು
ಮನಸ್ಸುಗಳ ತುಡಿತ ಮಿಡಿತವಿದು
ಭಾವನೆಗಳ ಭಾವಾತಿರೆಖದ ಮಿಲನವಿದು
ಕಂಡೊಡನೆಯೇ ಸೂಜಿಗಲ್ಲಿನ ಸೆಳೆತವಿದು
ಯಾವ ಅಂಕೆ ಶಂಕೆಗೂ ನಿಲುಕದಿದು
ಎಲ್ಲರೆದೆಯೋಳಗೂ ಹರಿವ ಗುಪ್ತಗಾಮಿನಿಯಿದು
ಜಗತ್ತನ್ನೇ ಆಳುವ ಸಾರ್ವಬೌಮನಿದು
ಪ್ರತಿ ಮನುಷ್ಯನೊಳಗಿನ ಅಂತರ್ಗತ ಸೌಂದರ್ಯವಿದು
ಹೃದಯ ಹೃದಯಗಳ ನಡುವಿನ ಚುಂಬಕ ಶಕ್ತಿಯಿದು
ಆದರೆ ಗುರುತಿಸಲಾಗಿಲ್ಲವೆನಗೆ ಇದುವರೆಗೆ ಇದೇನೆಂದು
ಸ್ನೇಹಿತರಾರಾದರು ಇದಕ್ಕೆ ಉತ್ತರಿಸುವಿರ ಇಂದು.........
ಭಾವನೆಗಳ ಭಾವಾತಿರೆಖದ ಮಿಲನವಿದು
ಕಂಡೊಡನೆಯೇ ಸೂಜಿಗಲ್ಲಿನ ಸೆಳೆತವಿದು
ಯಾವ ಅಂಕೆ ಶಂಕೆಗೂ ನಿಲುಕದಿದು
ಎಲ್ಲರೆದೆಯೋಳಗೂ ಹರಿವ ಗುಪ್ತಗಾಮಿನಿಯಿದು
ಜಗತ್ತನ್ನೇ ಆಳುವ ಸಾರ್ವಬೌಮನಿದು
ಪ್ರತಿ ಮನುಷ್ಯನೊಳಗಿನ ಅಂತರ್ಗತ ಸೌಂದರ್ಯವಿದು
ಹೃದಯ ಹೃದಯಗಳ ನಡುವಿನ ಚುಂಬಕ ಶಕ್ತಿಯಿದು
ಆದರೆ ಗುರುತಿಸಲಾಗಿಲ್ಲವೆನಗೆ ಇದುವರೆಗೆ ಇದೇನೆಂದು
ಸ್ನೇಹಿತರಾರಾದರು ಇದಕ್ಕೆ ಉತ್ತರಿಸುವಿರ ಇಂದು.........
ಯಾವ ಕವಿಯು ಬರೆಯಲಾರ
UÉzÀÝ ¤£ÀßAvÀªÀgÀÄ ©ÃUÀÄvÁÛgÉ
¸ÉÆÃvÀ £À£ÀßAvÀªÀgÀÄ D ¸ÉÆqÀjUÁV £ÀgÀ¼ÀÄvÁÛgÉ
UÉzÀݪÀgÀ ªÀÄ£À¸ÀªÀÄÄzÀæ ªÀÄAxÀ£ÀUÉÆ¼ÀÄîvÀÛzÉ
»AzÉ ¤AvÀ zÉêÀvÉUÀ¼ÀAvÉ CªÀÄÈvÀ ¥ÀqÉAiÀÄÄvÁÛgÉ CªÀgÀÄ
PÉÊUÉlÄPÀzÀ ¦æÃw ¢£À¢£ÀPÉÌ PÀ¯ÁèUÀÄvÀÛzÉ
¸ÉÆÃvÀ £ÁªÀÅ CzÀ£Éß zÉêÀgÉAzÀÄ DgÁ¢ü¸ÀÄvÉÛêÉ
EzÀ PÀAqÀÄ PÀ« K£ÉAzÀÄ §gÉzÁ£ÀÄ
¦æÃw JAzÀgÉ ¸À«AiÉÄAzÀ, PÀ»AiÉÄAzÀ
UÉzÀݪÀgÀ ¦æÃw JzÉAiÉÆ¼ÀV£À ºÁqÁV
CªÀgÉÆ¼ÀUÉ ¥Àæw¨sÁj ¥À®è«¸ÀÄvÀÛzÉ
vÀªÀÄäzÉ ªÀÄÄV®ÄUÀ¼ÉƼÀUÉ gÉPȨ́rzÀÄ
PÀ£À¸ÀÄUÀ¼À ¥ÀvÀæ PÀnÖPÉÆAqÀÄ ºÁgÁqÀÄvÀÛzÉ
D ¥ÀvÀæzÉÆ¼ÀUÀt MAzÉÆAzÀÄ PÀ£À¸À ¥ÀzÀªÀÅ
¸Á«gÀ ºÁrUÉ ¸ÀªÀÄ£ÁV PÀgÀtzÉÆ¼ÀUÉ jAUÀt¸ÀÄvÀÛzÉ
¸ÉÆÃvÀªÀgÀ ¦æÃw PÀ£ÀßrAiÀÄ ZËPÀmÁÖV
£ÀªÉÆä¼ÀV£À PÀët PÀëtzÀ ªÀPÀævÉUÀ¼À£É®è vÀ£ÉÆß¼ÀUÉ vÉÆÃgÀÄvÀÛzÉ
C°è M¼À£ÉÆÃlªÀÅ E®è ºÉÆgÀ£ÉÆÃlªÀÅ E®è
PÀtÂÚUÉ PÀAqÀzÉÝ®è ¸ÀvÀå DzÀgÉ ¸ÀÄAzÀgÀ ªÀiÁvÀæ C®è
J®è JqÀgÀÄ vÉÆqÀgÀÄUÀ¼À ¸À¢Ý®èzÉ ¸À»¸À¯ÁUÀzÉ
ZËPÀn֣ɯ¼ÀUÀt ©A§ªÀ£Éß MqÉAiÀÄ §AiÀĸÀÄvÀÛzÉ
¤Ã£É ºÉüÀÄ UɼÀw EzÀPÀAqÀÄ PÀ« K£À §gÉzÁ£ÀÄ
¤£ÀßAvÀªÀgÀ RĶUÉ £À£ÀßAvÀªÀgÀ PÀ£ÀªÀjPÉUÀ½UÉ
PÉÆ£É ªÉÆzÀ®ÄUÀ¼É E®è«°è..! E£ÀÄß
AiÀiÁªÀ µÁ»AiÀİè C¢Ý CªÀ §gɪÀ£ÀÄ?
¤£ÀßAvÀªÀgÀ ¸ÀAvÉÆÃµÀzÀ ¥À¤ßÃj£À®è.? E®è
dUÀzÀUÀ® vÀÄA©PÉÆAqÀ £À£ÀßAvÀªÀgÀ £ÉÆÃ«£À®è
E®è AiÀiÁªÀ PÀ«AiÀÄÄ §gÉAiÀįÁgÀ
£ÁªÀÅ «gÀºÀzÀ ²®Ä¨ÉUÉÃgÀĪÀÅzÀ vÀqÉAiÀįÁgÀ
Ew ¤£Àß UÉ®è¯ÁUÀzÀ ¦æÃwAiÀÄ°è ¸ÉÆÃvÀªÀ
ಬುಧವಾರ, ಜನವರಿ 26, 2011
ನೀನೆ ಬರೀ ನೀನೆ
ಬರೀ ನನ್ನ ಪದಗಳೊಳಗೆ ನೀನಿಲ್ಲ
ಕವನಗಳ ಸಾಲಿನಲ್ಲಿ ಕೂರಲಿಲ್ಲ
ಕೇವಲ ನನ್ನ ಕಲ್ಪನೆಯೊಳಗೆ ನೀ ನಿಲ್ಲಲಿಲ್ಲ
ಕೈಗೆಟುಕದ ನಕ್ಷತ್ರವಾಗಿ ದೂರ ಉಳಿಯಲಿಲ್ಲ
ನನ್ನ ಮನದೊಳಗೆ ಎಂದೂ ಆಡದೆ ಉಳಿದ ಮಾತು ನೀನು
ನನ್ನೆದೆಯ ಪ್ರತಿಬಡಿತದ ಶಬ್ದ ನೀನು
ಎದೆಗೂಡ ಹೊಕ್ಕಿಬಂದ ಪ್ರತಿ ಹನಿ ರಕ್ತ ನೀನು
ನಾ ನಡೆವಾಗ ಸದ್ದಿಲ್ಲದೆ ಬೆನ್ನತ್ತಿದ ಛಾಯೆ ನೀನು
ಪ್ರತಿ ಉಚ್ವಾಸ ನಿಶ್ವಾಸದ ಆಮ್ಲ, ಇಂಗಾಲವು ನೀನೆ
ನಾ ಸತ್ತಾಗ ನನ್ನೆದೆಯನ್ನಲಂಕರಿಸುವ ಹೂ ನೀನೆ
ನನ್ನ ಸುಟ್ಟಾಗ ಉಳಿಯುವ ಬೂದಿ ನೀನೆ
ನನ್ನಾತ್ಮವ ದಿಗಂತದಾಚೆಗೆ ಹೊತ್ತೊಯ್ಯುವ ಗಾಳಿಯು ನೀನೆ
ಈ ಜೀವದ ಆದಿಯಿಂದ ಅಂತ್ಯದವರೆಗೆ ಎಲ್ಲವೂ ನೀನೆ
ನಂನತ್ಯದ ನಂತರ ಪರರಿಗೆ ಉಳಿಯುವ ನೆನಪು ನೀನೆ
ನನ್ನದು ಮತ್ತು ನನ್ನದಲ್ಲದ ಎಲ್ಲವೂ ನೀನೆ
ನೀನೆ ಬರೀ ನೀನೆ..........
ಕವನಗಳ ಸಾಲಿನಲ್ಲಿ ಕೂರಲಿಲ್ಲ
ಕೇವಲ ನನ್ನ ಕಲ್ಪನೆಯೊಳಗೆ ನೀ ನಿಲ್ಲಲಿಲ್ಲ
ಕೈಗೆಟುಕದ ನಕ್ಷತ್ರವಾಗಿ ದೂರ ಉಳಿಯಲಿಲ್ಲ
ನನ್ನ ಮನದೊಳಗೆ ಎಂದೂ ಆಡದೆ ಉಳಿದ ಮಾತು ನೀನು
ನನ್ನೆದೆಯ ಪ್ರತಿಬಡಿತದ ಶಬ್ದ ನೀನು
ಎದೆಗೂಡ ಹೊಕ್ಕಿಬಂದ ಪ್ರತಿ ಹನಿ ರಕ್ತ ನೀನು
ನಾ ನಡೆವಾಗ ಸದ್ದಿಲ್ಲದೆ ಬೆನ್ನತ್ತಿದ ಛಾಯೆ ನೀನು
ಪ್ರತಿ ಉಚ್ವಾಸ ನಿಶ್ವಾಸದ ಆಮ್ಲ, ಇಂಗಾಲವು ನೀನೆ
ನಾ ಸತ್ತಾಗ ನನ್ನೆದೆಯನ್ನಲಂಕರಿಸುವ ಹೂ ನೀನೆ
ನನ್ನ ಸುಟ್ಟಾಗ ಉಳಿಯುವ ಬೂದಿ ನೀನೆ
ನನ್ನಾತ್ಮವ ದಿಗಂತದಾಚೆಗೆ ಹೊತ್ತೊಯ್ಯುವ ಗಾಳಿಯು ನೀನೆ
ಈ ಜೀವದ ಆದಿಯಿಂದ ಅಂತ್ಯದವರೆಗೆ ಎಲ್ಲವೂ ನೀನೆ
ನಂನತ್ಯದ ನಂತರ ಪರರಿಗೆ ಉಳಿಯುವ ನೆನಪು ನೀನೆ
ನನ್ನದು ಮತ್ತು ನನ್ನದಲ್ಲದ ಎಲ್ಲವೂ ನೀನೆ
ನೀನೆ ಬರೀ ನೀನೆ..........
ಸೋಮವಾರ, ಜನವರಿ 24, 2011
ಬಳಿಸಾರದಿರು
ಎಚ್ಚರ ಗೆಳತಿ ಸಾಲು ಹಣತೆಯನ್ನಚ್ಚಿದ್ದೇನೆ
ನೀ ಬಳಿಸಾರುವಲ್ಲಿಗೆ
ಅತಿ ಸನಿಹ ಸುಳಿಯದಿರು ನೀನು
ನಿನ್ನ ಉಸಿರ್ಗಾಳಿ ತಾಕಿ ಹಣತೆ ಆರುವುದೆಂದಲ್ಲ
ಅದರ ಬಿಸಿ ನಿನ್ನುಸಿರ ಬಿಸಿಗಾಳಿಯ ಮೀರಿಸಿ
ನಿನ್ನ ಕದಪುಗಳಿಗೆ ಶಾಖ ನೀಡೀತೆಂದು
ನೀ ಬಳಿಸಾರುವಲ್ಲಿಗೆ
ಅತಿ ಸನಿಹ ಸುಳಿಯದಿರು ನೀನು
ನಿನ್ನ ಉಸಿರ್ಗಾಳಿ ತಾಕಿ ಹಣತೆ ಆರುವುದೆಂದಲ್ಲ
ಅದರ ಬಿಸಿ ನಿನ್ನುಸಿರ ಬಿಸಿಗಾಳಿಯ ಮೀರಿಸಿ
ನಿನ್ನ ಕದಪುಗಳಿಗೆ ಶಾಖ ನೀಡೀತೆಂದು
ಶನಿವಾರ, ಜನವರಿ 22, 2011
ಅವನು ಮತ್ತು ಅವಳ ಕನಸುಗಳ ನಡುವಿನ ಗುದ್ದಾಟ
ನಿನ್ನ ಕನಸುಗಳನ್ನೆಲ್ಲ ಬರೆಬರೆದು
ಕಾಗದದ ದೋಣಿ ಮಾಡಿ
ನಿನ್ನತ್ತ ತೇಲಿಬಿಟ್ಟಿದ್ದೇನೆ ಗೆಳತಿ
ಭವಿಷ್ಯದ ನದಿಯೊಳಗೆ ತೇಲಿಬಂದು
ನಿನ್ನ ಬಾಳಿನ ದಡವ ತಲುಪಬಹುದು ಅವು
ನೆನೆದು ಮುದ್ದೆಯಾಗಿವೆಯೆಂದು ಬಿಸುಟಬೇಡ
ಎಚ್ಚರವಾಗಿ ಬಿಡಿಸಿ ಓದು ಸಾಕು ಒಮ್ಮೆ
ಅವು ಪೂರ ನಿನ್ನವು ಜೊತೆಗೆ ನನ್ನವು
ಕನಸುಗಳೆಂದರೆ ಭೂತ ಪ್ರೇತಗಳ ನರ್ತನ
ಅತೃಪ್ತ ಮನಸ್ಸುಗಳ ಬಗೆಬಗೆಯ ವ್ಯಾಖ್ಯಾನ
ಕನಸುಗಳ ಇತ್ತ ಅಲ್ಲದೆ ಎತ್ತಲೂ ಎಸೆಯಬೇಡ
ಇಂದಿನ ಕನಸುಗಳೆ ನಾಳಿನ ಬದುಕ ತುಳಿಯಬಹುದು
ಜೀವನವ ಹರಿದು ಹಂಚುವ ಮೊದಲೆ ತೊರೆದುಬಿಡು
ಬಿಡಿಸಿ ಅದರ ಬಂದನದೊಳಗೆ ಸಿಲುಕಬೇಡ
ಬದುಕೆಲ್ಲ ನಿನ್ನದೇ ಮತ್ತು ನೀನಿಲ್ಲದಿದ್ದಾಗ್ಯು ನನ್ನದೂ ಕೂಡ
ನಿನ್ನ ಕನಸುಗಳನ್ನೆಲ್ಲ ಬರೆಬರೆದು
ಕಾಗದದ ದೋಣಿ ಮಾಡಿ
ನಿನ್ನತ್ತ ತೇಲಿಬಿಟ್ಟಿದ್ದೇನೆ ಗೆಳತಿ
ಭವಿಷ್ಯದ ನದಿಯೊಳಗೆ ತೇಲಿಬಂದು
ನಿನ್ನ ಬಾಳಿನ ದಡವ ತಲುಪಬಹುದು ಅವು
ನೆನೆದು ಮುದ್ದೆಯಾಗಿವೆಯೆಂದು ಬಿಸುಟಬೇಡ
ಎಚ್ಚರವಾಗಿ ಬಿಡಿಸಿ ಓದು ಸಾಕು ಒಮ್ಮೆ
ಅವು ಪೂರ ನಿನ್ನವು ಜೊತೆಗೆ ನನ್ನವು
ಕನಸುಗಳೆಂದರೆ ಭೂತ ಪ್ರೇತಗಳ ನರ್ತನ
ಅತೃಪ್ತ ಮನಸ್ಸುಗಳ ಬಗೆಬಗೆಯ ವ್ಯಾಖ್ಯಾನ
ಕನಸುಗಳ ಇತ್ತ ಅಲ್ಲದೆ ಎತ್ತಲೂ ಎಸೆಯಬೇಡ
ಇಂದಿನ ಕನಸುಗಳೆ ನಾಳಿನ ಬದುಕ ತುಳಿಯಬಹುದು
ಜೀವನವ ಹರಿದು ಹಂಚುವ ಮೊದಲೆ ತೊರೆದುಬಿಡು
ಬಿಡಿಸಿ ಅದರ ಬಂದನದೊಳಗೆ ಸಿಲುಕಬೇಡ
ಬದುಕೆಲ್ಲ ನಿನ್ನದೇ ಮತ್ತು ನೀನಿಲ್ಲದಿದ್ದಾಗ್ಯು ನನ್ನದೂ ಕೂಡ
ಗುರುವಾರ, ಜನವರಿ 13, 2011
ಮಾಗಿಯ ಚಳಿ
ಯಾಕೋ ಕಾಣೆ ಕಣೆ ಈಗ್ಗೆ ಮೂರು ದಿನಗಳಿಂದ ಚಳಿ ಹೆಚ್ಚಾಗಿದೆ ಈ ಬಾರಿ ಮಾರ್ಗಶಿರದಲ್ಲೇ ಮಾಗಿಯ ಅನುಭವವಾಗುತ್ತಿದೆ. ನೋಡು ಇಂದು ಬೆಳಗ್ಗೆ ಕೂಡ ೩ ಗಂಟೆಗೆ ಎಚ್ಚರಾಯಿತು, ತಡರಾತ್ರಿಯ ಕಡುಗತ್ತಲು ಇನ್ನೂ ಕಳೆದಿರಲಿಲ್ಲ ಮೈ ಕೋರೈಸುವ ನಡುಕ ಆಗತಾನೆ ಶುರುವಾಗುತ್ತಿತ್ತು ನಿನ್ನ ನೆನಪುಗಳೊಂದಿಗೆ. ಮತ್ತೆ ಮಲಗುವ ವ್ಯರ್ಥ ಪ್ರಯತ್ನ ಮಾಡಿದೆ ಅದೆಷ್ಟು ಕಂಬಳಿಗಳ ಹೊದಿಕೆಗಲೊಳಗೆ ನುಸುಳಿದರು ನಿನ್ನ ನೆನಪುಗಳು ಬೆಚ್ಚಗಾಗಲಿಲ್ಲ, ರಕ್ತ ಹೆಪ್ಪುಗಟ್ಟುವಂತೆ ಹೃದಯದೊಳಗೆ ನಡುಕ ಸೃಷ್ಟಿಸಿತ್ತು ನೆನಪಿದೆಯ ನಿನಗೆ ಅಂದು ಕಡೆ ಭಾರಿ ನಿನ್ನ ಭೇಟಿಯಾದಾಗ ರೈಲ್ವೆ ನಿಲ್ದಾಣದ ಮೊದಲನೇ ಅಂಕಣದಲ್ಲೇ ಕಟ್ಟಾ ಕೊನೆಯ ಬೋಗಿಯ ಮಗ್ಗುಲಲ್ಲೇ ನಿಂತು ನಿನ್ನೊಟ್ಟಿಗೆ ಮಾತನಾಡುತ್ತಿದ್ದಾಗ ಎಲ್ಲರ ಕಣ್ಣೋಟಗಳೂ ಕೂಡ ನಮ್ಮೆಡೆಗೆ ಶತ್ರುವಿನೆಡೆಗೆ ತ್ರಿಶೂಲ ನೆಟ್ಟಿದಂತೆಯೇ ನೆಟ್ಟಿದ್ದವು ಅದು ನಮ್ಮಿಬ್ಬರಿಗೂ ಗೊತ್ತು. ರೈಲ್ವೆ ನಿಲ್ದಾಣದಲ್ಲಿ ಹೆಜ್ಜೆಗೊಂದರಂತೆ ನಿಂತಿದ್ದ ದೀಪದ ಕಂಬಗಳ ಬೆಳಕಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಂದು ಸಹ ಇಂದಿನಂತೆಯೇ ಜನವರಿ ೩೧ ರ ನಟ್ಟ ನಡುರಾತ್ರಿ ನಾವಿಬ್ಬರು ಮೊದಲ ಮತ್ತು ಇಲ್ಲಿಯವರೆಗೆ ಕೊನೆಯ ಭಾರಿಗೆ ಎರಡು ದಿನಗಳ ಸಂಗಮ ಸಮಯವನ್ನು ಆಸ್ವಾದಿಸಿದ್ದೆವು ಫೆಬ್ರವರಿ ೧ ನೆ ತಾರೀಖು ಶುರುವಾದ ಕೆಲವು ನಿಮಿಷಗಳಲ್ಲೇ ಬೀಳ್ಕೊಟ್ಟಿದ್ದೆ ನಿನ್ನ,
ನಾನೇನೋ ಹೊಚ್ಹ ಹೊಸ ಜರ್ಕಿನ್ನನ್ನು ಧರಿಸಿ ಬೆಚ್ಚಗೆ ನಿಂತಿದ್ದಾಗಲು ನೀನು ಪುಷ್ಯದಿಂದ ಶಿಶಿರದೆಡೆಗೆ ಸಾಗುತ್ತಿದ್ದ ಚಳಿಯಲ್ಲಿ ನಡುಗುತ್ತಿದ್ದೆ ಇಬ್ಬರಲ್ಲೂ ಮಾತಿರಲಿಲ್ಲ ಬರೀ ಮೌನದ ಮೆರವಣಿಗೆ ಸಾಗುತ್ತಿತ್ತು ಸಂಕ್ರಾಂತಿಯ ಎಳ್ಳು ಬೆಲ್ಲವನ್ನು ಜತನದಿಂದ ತಂದು ಕೈಗಿತ್ತಾಗ ಸನಿಹಸಾರಿದ್ದರು ಸಹ ಕಿರುಬೇರಲೂ ಕೂಡ ತಾಕದಂತೆ ಎಚ್ಚರ ವಹಿಸಿದ್ದೆವು (ಎಸ್ಟೋ ದಿನಗಳು ಅದನ್ನು ತಿನ್ನದೇ ಹಾಗೆ ಇಟ್ಟಿದದ್ದು ಬೇರೆ ಬಿಡು) ರೈಲು ಹೊರಡುವ ಕಡೆ ಕ್ಷಣದವರೆಗೆ ನೀ ನಿಂತಿದ್ದು ಹೊರಡುತ್ತಿದ್ದ ರೈಲನತ್ತುತ್ತಿದ್ದಾಗ ಮತ್ತದೇ ನನ್ನ ಭಾರವಾದ ಹೃದಯ ನಿಡಿದಾದ ನಿಟ್ಟುಸಿರಿನೊಂದಿಗೆ ಬೀಳ್ಕೊಟ್ಟಿತ್ತು, ಹೇಗೋ ಏನೋ ಮಿಂಚಂತೆ ವರ್ಷ ಕಳೆಯಿತು ಮತ್ತೆ ಎಳ್ಳು ಬೆಲ್ಲದ ಹಬ್ಬ ಬಂದಿದೆ, ಕೊಡು ಎಂದು ಮತ್ತೆ ಕೇಳುವುದಿಲ್ಲ ಏಕೆಂದರೆ ನೀ ಕೊಡದಿರುವುದಿಲ್ಲವೆಂದು ಗೊತ್ತು ಎಳ್ಳು ಬೆಲ್ಲವ, ಆದರೆ ನೀ ಕೊಡದಿರುವುದು ನಿನ್ನ ನೆನಪುಗಳಿಗೆ ಪೂರ್ಣ ವಿರಾಮದೊಂದಿಗೆ ಈ ಹೃದಯಕ್ಕೆ ಬೆಚ್ಚಗಿನ ಅನುಭವವೊಂದನ್ನು ಮಾತ್ರ...
ಇತಿ
ನಿನ್ನ ನೆನಪುಗಲೊಡೆಯ
ನಾನೇನೋ ಹೊಚ್ಹ ಹೊಸ ಜರ್ಕಿನ್ನನ್ನು ಧರಿಸಿ ಬೆಚ್ಚಗೆ ನಿಂತಿದ್ದಾಗಲು ನೀನು ಪುಷ್ಯದಿಂದ ಶಿಶಿರದೆಡೆಗೆ ಸಾಗುತ್ತಿದ್ದ ಚಳಿಯಲ್ಲಿ ನಡುಗುತ್ತಿದ್ದೆ ಇಬ್ಬರಲ್ಲೂ ಮಾತಿರಲಿಲ್ಲ ಬರೀ ಮೌನದ ಮೆರವಣಿಗೆ ಸಾಗುತ್ತಿತ್ತು ಸಂಕ್ರಾಂತಿಯ ಎಳ್ಳು ಬೆಲ್ಲವನ್ನು ಜತನದಿಂದ ತಂದು ಕೈಗಿತ್ತಾಗ ಸನಿಹಸಾರಿದ್ದರು ಸಹ ಕಿರುಬೇರಲೂ ಕೂಡ ತಾಕದಂತೆ ಎಚ್ಚರ ವಹಿಸಿದ್ದೆವು (ಎಸ್ಟೋ ದಿನಗಳು ಅದನ್ನು ತಿನ್ನದೇ ಹಾಗೆ ಇಟ್ಟಿದದ್ದು ಬೇರೆ ಬಿಡು) ರೈಲು ಹೊರಡುವ ಕಡೆ ಕ್ಷಣದವರೆಗೆ ನೀ ನಿಂತಿದ್ದು ಹೊರಡುತ್ತಿದ್ದ ರೈಲನತ್ತುತ್ತಿದ್ದಾಗ ಮತ್ತದೇ ನನ್ನ ಭಾರವಾದ ಹೃದಯ ನಿಡಿದಾದ ನಿಟ್ಟುಸಿರಿನೊಂದಿಗೆ ಬೀಳ್ಕೊಟ್ಟಿತ್ತು, ಹೇಗೋ ಏನೋ ಮಿಂಚಂತೆ ವರ್ಷ ಕಳೆಯಿತು ಮತ್ತೆ ಎಳ್ಳು ಬೆಲ್ಲದ ಹಬ್ಬ ಬಂದಿದೆ, ಕೊಡು ಎಂದು ಮತ್ತೆ ಕೇಳುವುದಿಲ್ಲ ಏಕೆಂದರೆ ನೀ ಕೊಡದಿರುವುದಿಲ್ಲವೆಂದು ಗೊತ್ತು ಎಳ್ಳು ಬೆಲ್ಲವ, ಆದರೆ ನೀ ಕೊಡದಿರುವುದು ನಿನ್ನ ನೆನಪುಗಳಿಗೆ ಪೂರ್ಣ ವಿರಾಮದೊಂದಿಗೆ ಈ ಹೃದಯಕ್ಕೆ ಬೆಚ್ಚಗಿನ ಅನುಭವವೊಂದನ್ನು ಮಾತ್ರ...
ಇತಿ
ನಿನ್ನ ನೆನಪುಗಲೊಡೆಯ
ಸೋಮವಾರ, ಜನವರಿ 3, 2011
ಮಾತುಗಳು
ನಾವು ಆಡಿದ್ದು ಬರೀ ಮಾತು
ಅದು
ಕಾಲನ ತೆರೆಯೊಳಗೆ ಸದ್ದಿಲ್ಲದೆ ಸರಿದೊಗುತ್ತದೆ
ಆಡಿದ ಮಾತುಗಳ ಸತ್ಯ ನಮಗಸ್ಟೆ ತಿಳಿದಿರುತ್ತದೆ
ಮದ್ಯಾನ್ಹದ ಮಾತುಗಳೆಲ್ಲ ಸಂಜೆಗೆ ಇತಿಹಾಸ
ರಾತ್ರಿ ಮಾತ್ರ
ಕಂಬಳಿ ಹೊದಿಕೆಯೊಳಗೆ ನಿದ್ದೆ ತರದೆ ಕಾಡುತ್ತಿರುತ್ತದೆ.
ಏನೇನೋ ನಡೆಯುತ್ತದೆ ಮನದೊಳಗೆ
ನಿಮಿಷಕ್ಕೊಮ್ಮೆ ಹಳೆಯ ಮಾತುಗಳಿಗೆ ವಯಸ್ಸಾಗುತ್ತದೆ
ಆದರೆ ಇತಿಹಾಸ ಮಾತ್ರ ಬದಲಾಗೊಲ್ಲ
ನೀವೆಳಿದರೆನಂತೆ ಅಂದದ್ದಕ್ಕೆ ಅಸಮ್ಮತಿ ಎಂದು
ಕೊಟ್ಟ ಭರವಸೆಗಳು ಕೊಟ್ಟಂತೆಯೇ ಉಳಿದಿರುತ್ತವೆ
ಜೀವನದ ಸಂತೆಯಲ್ಲಿ ಎಲ್ಲವು ವ್ಯಾಪಾರಗಳೇ
ಕೊಡುವುದೇನೋ, ಪಡೆವುದೇನೋ ಅವರವರಿಗೆ ಗೊತ್ತು
ನಿನ್ನ ಮಾತಿಗೆ ನನ್ನ ಮಾತುಗಳೆ ವಿನಿಮಯ
ನಮ್ಮಿಬ್ಬರಲ್ಲಿ
ಕೊಟ್ಟು ಪಡೆವುದಕ್ಕೆ ಇನ್ನೊಂದಿಸ್ಟು ಉಳಿದಿದ್ದರೆ ಸಾಕು
ನಾಳೆಗೂ ವ್ಯಾಪಾರ ಮುಂದುವರಿಯ ಬೇಕಲ್ಲ.............
ಅದು
ಕಾಲನ ತೆರೆಯೊಳಗೆ ಸದ್ದಿಲ್ಲದೆ ಸರಿದೊಗುತ್ತದೆ
ಆಡಿದ ಮಾತುಗಳ ಸತ್ಯ ನಮಗಸ್ಟೆ ತಿಳಿದಿರುತ್ತದೆ
ಮದ್ಯಾನ್ಹದ ಮಾತುಗಳೆಲ್ಲ ಸಂಜೆಗೆ ಇತಿಹಾಸ
ರಾತ್ರಿ ಮಾತ್ರ
ಕಂಬಳಿ ಹೊದಿಕೆಯೊಳಗೆ ನಿದ್ದೆ ತರದೆ ಕಾಡುತ್ತಿರುತ್ತದೆ.
ಏನೇನೋ ನಡೆಯುತ್ತದೆ ಮನದೊಳಗೆ
ನಿಮಿಷಕ್ಕೊಮ್ಮೆ ಹಳೆಯ ಮಾತುಗಳಿಗೆ ವಯಸ್ಸಾಗುತ್ತದೆ
ಆದರೆ ಇತಿಹಾಸ ಮಾತ್ರ ಬದಲಾಗೊಲ್ಲ
ನೀವೆಳಿದರೆನಂತೆ ಅಂದದ್ದಕ್ಕೆ ಅಸಮ್ಮತಿ ಎಂದು
ಕೊಟ್ಟ ಭರವಸೆಗಳು ಕೊಟ್ಟಂತೆಯೇ ಉಳಿದಿರುತ್ತವೆ
ಜೀವನದ ಸಂತೆಯಲ್ಲಿ ಎಲ್ಲವು ವ್ಯಾಪಾರಗಳೇ
ಕೊಡುವುದೇನೋ, ಪಡೆವುದೇನೋ ಅವರವರಿಗೆ ಗೊತ್ತು
ನಿನ್ನ ಮಾತಿಗೆ ನನ್ನ ಮಾತುಗಳೆ ವಿನಿಮಯ
ನಮ್ಮಿಬ್ಬರಲ್ಲಿ
ಕೊಟ್ಟು ಪಡೆವುದಕ್ಕೆ ಇನ್ನೊಂದಿಸ್ಟು ಉಳಿದಿದ್ದರೆ ಸಾಕು
ನಾಳೆಗೂ ವ್ಯಾಪಾರ ಮುಂದುವರಿಯ ಬೇಕಲ್ಲ.............
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)


