ನನ್ನುಸಿರಿನ ತಾಳದಲ್ಲಿ
ಒಲವನ್ನೆ ರಾಗ ಮಾಡಿ
ಜೀವನದ ರಂಗಶಾಲೆಯೊಳು
ಪ್ರೀತಿಯ ಆಲಾಪ ನುಡಿಸಬೇಕೆಂದಿದ್ದೆ
ಏನಾಯ್ತೋ ಏನೊ ನಾಕಾಣೆ
ನಿನ್ನ ಚಿತ್ತ ಇತ್ತ ಸುಳಿಯಲಿಲ್ಲ
ಅದಾವ ಸಂಗೀತ ಮಾಯೆ ನಿನ್ನನಾಗಲೆ ಹೊಕ್ಕಿರುವುದೋ
ಅದರೊಲವಿನ ವೀಣೆಯ ನಿನ್ನೆದೆಯೊಳಗೆ ನುಡಿಸಿರುವುದೋ
ಬಾ ನನ್ನೊಲವ ಸಂಗೀತ ಭಾಸ್ಕರ
ನನ್ನ ಜೀವನದಲ್ಲೂ ಒಮ್ಮೆ ಉದಯಿಸು ಬಾ
ನಿನಗಾಗಿ ನಾನು ಸಂಗೀತ ಸುಧೆ ಹರಿಸುತ್ತೇನೆ
ನಿನ್ನ ಸಂಗೀತ ದಾಹವ ತಣಿಸುತ್ತೇನೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ