ಗುರುವಾರ, ಜನವರಿ 27, 2011

ಏನಿದು

ಮನಸ್ಸುಗಳ ತುಡಿತ ಮಿಡಿತವಿದು
ಭಾವನೆಗಳ ಭಾವಾತಿರೆಖದ ಮಿಲನವಿದು
ಕಂಡೊಡನೆಯೇ ಸೂಜಿಗಲ್ಲಿನ  ಸೆಳೆತವಿದು
ಯಾವ ಅಂಕೆ ಶಂಕೆಗೂ ನಿಲುಕದಿದು
ಎಲ್ಲರೆದೆಯೋಳಗೂ ಹರಿವ ಗುಪ್ತಗಾಮಿನಿಯಿದು
ಜಗತ್ತನ್ನೇ ಆಳುವ ಸಾರ್ವಬೌಮನಿದು
ಪ್ರತಿ ಮನುಷ್ಯನೊಳಗಿನ ಅಂತರ್ಗತ ಸೌಂದರ್ಯವಿದು
ಹೃದಯ ಹೃದಯಗಳ ನಡುವಿನ ಚುಂಬಕ ಶಕ್ತಿಯಿದು
ಆದರೆ ಗುರುತಿಸಲಾಗಿಲ್ಲವೆನಗೆ ಇದುವರೆಗೆ ಇದೇನೆಂದು
ಸ್ನೇಹಿತರಾರಾದರು ಇದಕ್ಕೆ ಉತ್ತರಿಸುವಿರ ಇಂದು.........
        

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ