ಬುಧವಾರ, ಜನವರಿ 26, 2011

ನೀನೆ ಬರೀ ನೀನೆ

ಬರೀ ನನ್ನ ಪದಗಳೊಳಗೆ ನೀನಿಲ್ಲ
ಕವನಗಳ ಸಾಲಿನಲ್ಲಿ ಕೂರಲಿಲ್ಲ
ಕೇವಲ ನನ್ನ ಕಲ್ಪನೆಯೊಳಗೆ ನೀ ನಿಲ್ಲಲಿಲ್ಲ
ಕೈಗೆಟುಕದ ನಕ್ಷತ್ರವಾಗಿ ದೂರ ಉಳಿಯಲಿಲ್ಲ

ನನ್ನ ಮನದೊಳಗೆ ಎಂದೂ ಆಡದೆ ಉಳಿದ ಮಾತು ನೀನು

ನನ್ನೆದೆಯ ಪ್ರತಿಬಡಿತದ ಶಬ್ದ ನೀನು
ಎದೆಗೂಡ ಹೊಕ್ಕಿಬಂದ ಪ್ರತಿ ಹನಿ ರಕ್ತ ನೀನು
ನಾ ನಡೆವಾಗ ಸದ್ದಿಲ್ಲದೆ ಬೆನ್ನತ್ತಿದ ಛಾಯೆ ನೀನು

ಪ್ರತಿ ಉಚ್ವಾಸ ನಿಶ್ವಾಸದ ಆಮ್ಲ, ಇಂಗಾಲವು ನೀನೆ

ನಾ ಸತ್ತಾಗ ನನ್ನೆದೆಯನ್ನಲಂಕರಿಸುವ ಹೂ ನೀನೆ
ನನ್ನ ಸುಟ್ಟಾಗ ಉಳಿಯುವ ಬೂದಿ ನೀನೆ
ನನ್ನಾತ್ಮವ ದಿಗಂತದಾಚೆಗೆ ಹೊತ್ತೊಯ್ಯುವ ಗಾಳಿಯು ನೀನೆ

ಈ ಜೀವದ ಆದಿಯಿಂದ ಅಂತ್ಯದವರೆಗೆ ಎಲ್ಲವೂ ನೀನೆ

ನಂನತ್ಯದ ನಂತರ ಪರರಿಗೆ ಉಳಿಯುವ ನೆನಪು ನೀನೆ
ನನ್ನದು ಮತ್ತು ನನ್ನದಲ್ಲದ ಎಲ್ಲವೂ ನೀನೆ
ನೀನೆ ಬರೀ ನೀನೆ..........



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ