ಸೋಮವಾರ, ಜನವರಿ 3, 2011

ಮಾತುಗಳು

ನಾವು ಆಡಿದ್ದು ಬರೀ ಮಾತು
ಅದು
ಕಾಲನ ತೆರೆಯೊಳಗೆ ಸದ್ದಿಲ್ಲದೆ ಸರಿದೊಗುತ್ತದೆ
ಆಡಿದ ಮಾತುಗಳ ಸತ್ಯ ನಮಗಸ್ಟೆ ತಿಳಿದಿರುತ್ತದೆ
ಮದ್ಯಾನ್ಹದ ಮಾತುಗಳೆಲ್ಲ ಸಂಜೆಗೆ ಇತಿಹಾಸ
ರಾತ್ರಿ ಮಾತ್ರ
ಕಂಬಳಿ ಹೊದಿಕೆಯೊಳಗೆ ನಿದ್ದೆ ತರದೆ ಕಾಡುತ್ತಿರುತ್ತದೆ.


ಏನೇನೋ ನಡೆಯುತ್ತದೆ ಮನದೊಳಗೆ
ನಿಮಿಷಕ್ಕೊಮ್ಮೆ ಹಳೆಯ ಮಾತುಗಳಿಗೆ ವಯಸ್ಸಾಗುತ್ತದೆ
ಆದರೆ ಇತಿಹಾಸ ಮಾತ್ರ ಬದಲಾಗೊಲ್ಲ
ನೀವೆಳಿದರೆನಂತೆ ಅಂದದ್ದಕ್ಕೆ ಅಸಮ್ಮತಿ ಎಂದು
ಕೊಟ್ಟ ಭರವಸೆಗಳು ಕೊಟ್ಟಂತೆಯೇ ಉಳಿದಿರುತ್ತವೆ


ಜೀವನದ ಸಂತೆಯಲ್ಲಿ ಎಲ್ಲವು ವ್ಯಾಪಾರಗಳೇ
ಕೊಡುವುದೇನೋ, ಪಡೆವುದೇನೋ ಅವರವರಿಗೆ ಗೊತ್ತು
ನಿನ್ನ ಮಾತಿಗೆ ನನ್ನ ಮಾತುಗಳೆ ವಿನಿಮಯ
ನಮ್ಮಿಬ್ಬರಲ್ಲಿ
ಕೊಟ್ಟು ಪಡೆವುದಕ್ಕೆ ಇನ್ನೊಂದಿಸ್ಟು ಉಳಿದಿದ್ದರೆ ಸಾಕು
ನಾಳೆಗೂ ವ್ಯಾಪಾರ ಮುಂದುವರಿಯ ಬೇಕಲ್ಲ.............

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ