ಶನಿವಾರ, ಅಕ್ಟೋಬರ್ 30, 2010

ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ

ನಿದ್ದೆ ಬರದೆ ಕನವರಿಸುತ್ತೇವೆ
ನಿದ್ರೆ ಕೊಡದ ದೇವರಿಗೂ ನಮಿಸುತ್ತೇವೆ
ವಿರಹವನ್ನೆ ಆಲಂಗಿಸಿ ಕೂರುತ್ತೇವೆ
ನಟ್ಟ ನಡುರಾತ್ರಿ ಎದ್ದು ನಗುತ್ತೇವೆ
ಕನಸುಗಳನ್ನೂ ಸಹ ಚುಂಬಿಸುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ

ಕನ್ನಡಿಯೊಳಗೆ ಕನಸ್ಸುಗಳನ್ನು ಹುಡುಕುತ್ತೇವೆ
ಪ್ರೀತಿಯನ್ನೇ ದ್ವೇಷಿಸುತ್ತೇವೆ
ಹೃದಯದೊಳಗಿನ ಕಿಚ್ಚನ್ನು ಹಾಗೆ ಮುಚ್ಚಿಡುತ್ತೇವೆ
ಮಾತುಗಳನ್ನೆಲ್ಲ ಮೂಕಗೊಳಿಸಿ ಮಣ್ಣು ಮಾಡುತ್ತೇವೆ
ಆಸೆಗಳನ್ನೆಲ್ಲ ಅದುಮಿಟ್ಟು ಅರಗಿಸಿಕೊಳ್ಳುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ

ಸಿಗದವರಿಗಾಗಿ ಸಿಕ್ಕ ಸಿಕ್ಕಲ್ಲೆಲ್ಲ ಸುತ್ತುತ್ತೇವೆ
ಮನದಂಗಳದಿ ಅವರಿಗೆಂದೆ ಹೂಗಳ ಬೆಳೆಸುತ್ತೇವೆ
ಎದೆಯ ಬಾಗಿಲನ್ನು ಮುಚ್ಚದೆ ತೆರೆದಿಡುತ್ತೇವೆ
ಪ್ರತಿ ಆಜ್ಞೆಗೂ ತಲೆಬಾಗಿ ವಂದಿಸುತ್ತೇವೆ
ಕಣ್ಣೊಳಗೆ ಕಣ್ಣಿಟ್ಟಗ ಸಣ್ಣಗೆ ನಡುಗುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ

ಬೇಡವೆಂದರೆ ಉಸಿರನ್ನೂ ಬಿಗಿ ಹಿಡಿಯುತ್ತೇವೆ
ಕಣ್ಮುಚ್ಚಿಯೂ ಕಲ್ಪನೆಯೊಳಗೆ ಮುಳುಗುತ್ತೇವೆ
ಯಾವ ಮುರುಳಿಯ ಗಾನಕ್ಕೂ ಕಿವಿ ಕೊಡದೆ ಕಾಯುತ್ತೇವೆ
ಎಲ್ಲ ಮಮಕಾರಗಳನ್ನೂ ಮರೆತು ನಿಲ್ಲುತ್ತೇವೆ
ತುಟಿಯಂಚಿನ ಸಣ್ಣ ಕಿರುನಗೆಗಾಗಿ ಮಂಡಿಯೂರಿ ಕೂರುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ

ಹೌದು ಏನೊಂದೂ ಪ್ರಯೋಜನವಿಲ್ಲ
ಗೊತ್ತಿಲ್ಲ ನಮಗೆ ನಮಗಾಗಿ ಅವರಿಲ್ಲ
ಗೊತ್ತಾದರು ಒಲವು ಕೇಳುವುದಿಲ್ಲ
ನಾಳೆ ಒಣಗುವ ಎಲೆಯ ಮೇಲೆ ಬರೆಯುತ್ತದೆ
ಕಂಬನಿಯ ಷಾಹಿಯಲ್ಲಿ ಅದ್ಡಿ ಅದ್ದಿ ಲೇಖನಿಯನ್ನು
ಯಾವ ತಪಾಲುಗಾರನು ಇಲ್ಲ ಕೊಂಡೋಗಿ ಕೊಡಲು
ಅಶ್ರು ಧಾರೆಯನ್ನೇ ಹರಿಸಿದರು ಎಲೆ ಒಣಗದಿರುವುದಿಲ್ಲ
ಇಲ್ಲ ಈ ಜಗತ್ತಿನ್ನಲ್ಲಿ ಪ್ರೀತಿಗೆ ಬೆಲೆಯಿಲ್ಲ
ಬೆಲೆ ಕಟ್ಟುವವರಂತು ಯಾರು ಇಲ್ಲ
ಗೊತ್ತಿದ್ದೂ ಇಲ್ಲದ ಪ್ರೇಮಕ್ಕಾಗಿ ಪರದಾಡುತ್ತೇವೆ
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ.........
ನಾವು ಪ್ರೇಮಿಗಳು ಈ ಪ್ರೀತಿಯಲ್ಲಿ...........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ