ಶುಕ್ರವಾರ, ಅಕ್ಟೋಬರ್ 29, 2010

ಬಾ ಗೆಳತಿ

ನೆನ್ನೆ ರಾತ್ರಿಯ ಕನಸು ನೀನು
ತಪ್ಪು ತಿಳೀಬೇಡ ಗೆಳತಿ
ನೀ ಬರೀ ರಾತ್ರಿಯ ಕನಸೆಂದು
ನನ್ನೆದೆಯ ಭುವಿಯೋಳಗಿನ ತೇವ ನೀನು
ನನ್ನ ಪ್ರತಿ ರಾತ್ರಿಯ ಕನಸುಗಳ ಒಡತಿ ನೀನು
ಕಣ್ಮುಂದೆ ಬಂದು ಕಾಣುಕ್ಕಿ ಕಾದದಿದ್ದರೇನು
ಪ್ರತಿರಾತ್ರಿಯು ಕನಸಾಗಿ ಬಂದು
ಈ ಮನದಂಗಳದಿ ಒಲವ ಜಡಿಮಳೆ ಸುರಿಸುತ್ತಿರುವೆ ನೀನು


ಬಾ ಗೆಳತಿ ಒಮ್ಮೆ ಬಂದು ನಿಂತು ಬಿಡು
ಕನಸಾಗಿ ಬರುವ ನಿನ್ನ
ಒಮ್ಮೆ ಕಣ್ತುಂಬ ನೋಡಿ ಕಣ್ತುಂಬಿಕೊಳ್ಳುವೆನು
ಕಣ್ಣ ರೆಪ್ಪೆಯೊಳಗೆ ಮುಚ್ಚಿ ಕಾಯುವೆನು
ದೃಷ್ಠಿ ಶೂನ್ಯವಾದರು ಕಣ್ಬಿಡದೆ ನಿನ್ನನ್ನಲ್ಲಿರಿಸುವೇನು
ಬರೀ ನನ್ನ ಕನಸುಗಳೊಳಗೆ ಬಂದಿಯಾಗದಿರು
ಬಂದನವ ಕಳಚಿ
ನನ್ನೊಲವ ದಡದ ಮೇಲೆ ನಿಲ್ಲು ಬಾ
ಪ್ರತಿ ಅಲೆಯೊಳಗೆ ನಾ ಸೇರಿ
ಪಂನೀರಾಗಿ ಪ್ರತಿಭಾರಿ ನಿನ್ನ ಚುಂಬಿಸುವೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ