ಮಂಗಳವಾರ, ಅಕ್ಟೋಬರ್ 26, 2010

ಮುತ್ತಾಗುವೆಯ

ಬೆಳಗಿನಲ್ಲಿ ಹೊಳೆವ ಮಂಜ ಮುತ್ತಾದರೇನು
ಬೆಳ್ಳಂ ಬೆಳ್ಳಗೆ ಹೊಳೆವ ಮುತ್ತು ನೀನು

ಗೊತ್ತಿಲ್ಲ ನೀನು ಮುತ್ತಾ ಎಂದು
ನಿನ್ನ ಮುತ್ತಿಕ್ಕುವಾಸೆ ಮಾತ್ರ ನನಗೆ

ಮಂಜೂ ಮುತ್ತಿಡುತ್ತದೆ ಹಸಿರೆಲೆಯ ಪೈರ
ಹಸಿರೆಲೆಯೂ ಮುತ್ತಿಕ್ಕಿ ಜಾರಿಸುತ್ತದೆ ಆ ಮುತ್ತ

ನೀ ಮುತ್ತಾಗುವೆಯ
ನನ್ನ ಮುತ್ತಿಕ್ಕುವೆಯ

ನಾ ಹಸಿರೆಲೆಯ ಪೈರಾದರು
ನಿನ್ನ ಜಾರದಂತೆ ಹಿಡಿದಿಡುವೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ